ಸಿನಿಮಾ ಸುದ್ದಿ

ನಿಮ್ಮ ಮಗು ಅವಧಿಗೂ ಮುನ್ನ ಜನಿಸಿದ್ದರೆ ಎದೆಗುಂದಬೇಡಿ: ಕರಣ್ ಜೋಹರ್

ಪೂರ್ಣಾವಧಿಗೂ ಮುಂಚಿತವಾಗಿ ೧೦ ವಾರಗಳ ಮೊದಲೇ ಬದಲಿ ತಾಯ್ತನದಿಂದ ಅವಳಿ ಜವಳಿ ಮಕ್ಕಳಿಗೆ ತಂದೆಯಾಗಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್,

ನಿಮ್ಮ ಮಗು ಅವಧಿಗೂ ಮುನ್ನ ಜನಿಸಿದ್ದರೆ ಎದೆಗುಂದಬೇಡಿ: ಕರಣ್ ಜೋಹರ್
ಸಾಂದರ್ಭಿಕ ಚಿತ್ರ
Published On :
ಮುಂಬೈ: ಪೂರ್ಣಾವಧಿಗೂ ಮುಂಚಿತವಾಗಿ ೧೦ ವಾರಗಳ ಮೊದಲೇ ಬದಲಿ ತಾಯ್ತನದಿಂದ ಅವಳಿ ಜವಳಿ ಮಕ್ಕಳಿಗೆ ತಂದೆಯಾಗಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್, ಅವಧಿಪೂರ್ವ ಹುಟ್ಟುವ ಮಕ್ಕಳ ಬಗ್ಗೆ ಎದೆಗುಂದುವುದು ಬೇಡ ಎಂದಿದ್ದಾರೆ. ರೂಹಿ ಮತ್ತು ಯಶ್ ಮಕ್ಕಳ ತಂದೆ ಕರಣ್, ಸರಿಯಾದ ಆರೈಕೆಯಿಂದ ಅವಧಿಪೂರ್ವ ಮಕ್ಕಳ ಸಾಮಾನ್ಯ ಬೆಳವಣಿಗೆ ಸಾಧ್ಯ ಎಂದಿದ್ದಾರೆ. 
ಬದಲಿ ತಾಯ್ತನದಿಂದ ತಂದೆಯಾಗಿರುವುದಾಗಿ ಈ ತಿಂಗಳ ಮೊದಲ ಭಾಗದಲ್ಲಿ ಕರಣ್ ಘೋಷಿಸಿಕೊಂಡಿದ್ದರು. ಸದ್ಯಕ್ಕೆ ಮಕ್ಕಳು ಈಗ ಸೂರ್ಯ ಮದರ್ ಅಂಡ್ ಚೈಲ್ಡ್ ಆಸ್ಪತ್ರೆಯ ನಿರ್ದೇಶಕ-ವೈದ್ಯ ಭುಪೇಂದ್ರ ಅವಸ್ಥಿ ಅವರ ಆರೈಕೆಯಲ್ಲಿವೆ. "ಇಬ್ಬರೂ ಮಕ್ಕಳು ಸಂತೋಷಕರ ಮತ್ತು ಆರೋಗ್ಯಕರ ಬಾಲ್ಯದತ್ತ ಧಾವಿಸುತ್ತಿದ್ದಾರೆ" ಎಂದು ಕರಣ್ ತಿಳಿಸಿದ್ದಾರೆ. 
ಅವಧಿಪೂರ್ವ ಜನಿಸುವ ಮಕ್ಕಳ ಆರೈಕೆಗಾಗಿಯೇ ಇರುವ ನಿಯೋನೇಟಲ್ ತೀವ್ರ ನಿಗಾ ಆರೈಕೆಯ ಬಗೆ ಅರಿವು ಮೂಡಿಸಲು ನಿರ್ದೇಶಕ ಮುಂದಾಗಿದ್ದಾರೆ. 
ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಬರಹವೊಂದನ್ನು ಹಂಚಿಕೊಂಡಿರುವ ಕರಣ್ "ಪ್ರತಿವರ್ಷ ಲಕ್ಷಾಂತರ ಅವಧಿಪೂರ್ವ ಮಕ್ಕಳು ಜನಿಸುತ್ತವೆ... ಆದರೆ ಆ ಮಕ್ಕಳು ಪುಟಿದೇಳಬಲ್ಲವಾಗಿರುತ್ತವೆ. ಸರಿಯಾದ ಆರೈಕೆಯಿಂದ ಬೇರೆ ಯಾವುದೇ ಮಕ್ಕಳಂತೆ ಅವುಗಳು ಉಳಿದುಕೊಳ್ಳುವ ಅವಕಾಶ ಕೂಡ ಉತ್ತಮವಾಗಿರುತ್ತದೆ" ಎಂದಿದ್ದಾರೆ. 
ಅವಧಿಗಿಂತಲೂ ಎರಡು ತಿಂಗಳು ಮುಂಚಿತವಾಗಿಯೇ ಜನಿಸಿದ ತಮ್ಮ ಮಕ್ಕಳ ತೂಕ ಅತಿ ಕಡಿಮೆ ಇದ್ದು ಮೊದಲಿಗೆ ಆತಂಕಗೊಂಡಿದ್ದೆ ಎಂದು ತಿಳಿಸಿರುವ ಕರಣ್ "ನನ್ನ ಕೂಸುಗಳ ಆರೋಗ್ಯದಲ್ಲಿ ಏರುಪೇರಾಗಬಹುದು ಎಂದು ತಿಳಿದು ನಾನು ಎದೆಗುಂದಿದ್ದೆ. ನಿಯೋನೇಟಲ್ ತೀವ್ರ ನಿಗಾ ಆರೈಕೆಯಲ್ಲಿ ಅವುಗಳನ್ನು ನೋಡಲು ದುಃಖವಾಗುತ್ತಿತ್ತು" ಎಂದಿರುವ ಕರಣ್ ಈಗ ಮಕ್ಕಳು ಚೇತರಿಸಿಕೊಳ್ಳುತ್ತಿರುವುದಕ್ಕೆ ಕಾನೂನು ಮತ್ತು ವೈದ್ಯಕೀಯ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. 
"ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಲು ಇಂತಹ ತಾರೆ ಮುಂದೆ ಬದಿರುವುದಕ್ಕೆ ಬಹಳ ಸಂತಸವಾಗಿದೆ" ಎಂದು ಅವಸ್ಥಿ ಹೇಳಿದ್ದಾರೆ. 
"ಅವಧಿಪೂರ್ವ ಜನಿಸುವ ಮಕ್ಕಳು ಮೊದಲ ಕೆಲವು ದಿನಗಳವರೆಗೆ, ವಾರಗಳವರೆಗೆ, ತಿಂಗಳವರೆಗೆ ಉಳಿದು ತಾವಾಗಿಯೇ ಚೇತರಿಸಿಕೊಂಡು ಹೊರಬರುವುದಕ್ಕೆ ಸಹಕರಿಸುವ ನಿಯೋನೇಟಲ್ ತೀವ್ರ ನಿಗಾ ಘಟಕಗಳು ಭಾರತಕ್ಕೆ ಇನ್ನು ಹೆಚ್ಚು ಅವಶ್ಯಕತೆ ಇದೆ" ಎಂದು ಅವಸ್ಥಿ ಹೇಳಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.