ಸುದೀಪ್ ಬಾಲಿವುಡ್ ಸಿನೆಮಾ ನಟನೆ ವದಂತಿ; ಇನ್ನು ಧೃಢೀಕರಣ ಇಲ್ಲ!
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿರುವ 'ಟೈಗರ್ ಜಿಂದಾ ಹೈ' ಸಿನೆಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ನಟಿಸಲಿದ್ದಾರೆ ಎಂಬ ವಿಕಿಪೀಡಿಯಾ ಮಾಹಿತಿಯಿಂದ ಅವರ ಅಭಿಮಾನಿಗಳ

Published On :
ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿರುವ 'ಟೈಗರ್ ಜಿಂದಾ ಹೈ' ಸಿನೆಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ನಟಿಸಲಿದ್ದಾರೆ ಎಂಬ ವಿಕಿಪೀಡಿಯಾ ಮಾಹಿತಿಯಿಂದ ಅವರ ಅಭಿಮಾನಿಗಳ ಬಳಗ ಸಂತಸಗೊಂಡಿದ್ದರು. ಈಗ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡ ಆ ಸಿನೆಮಾದ ಭಾಗವಾಗಲಿದ್ದಾರೆ ಎಂಬ ವದಂತಿಗಳು ಕೂಡ ಹಬ್ಬಿರುವುದರಿಂದ ಗೊಂದಲ ಸೃಷ್ಟಿಯಾಗಿದೆ.
ಸುದೀಪ್ ಪಾಕಿಸ್ತಾನದ ಐ ಎಸ್ ಐ ಏಜೆಂಟ್ ಪಾತ್ರದಲ್ಲಿಯೂ ಮತ್ತು ಗಿರೀಶ್ ಕಾರ್ನಾಡ್ ಆರ್ ಎ ಡಬ್ಲ್ಯೂ ಏಜೆಂಟ್ ಆಗಿಯೂ ನಟಿಸಲಿದ್ದಾರೆ ಎಂಬ ವದಂತಿಗಳು ಕೂಡ ಹರಡಿದ್ದವು.
ಆದರೆ ಈ ಬಾಲಿವುಡ್ ಯಾಯೋಜನೆಯ ಬಗ್ಗೆ ಯಾವ ನಟನು ತುಟಿ ಬಿಚ್ಚಿಲ್ಲ. ಈ ಸಿನೆಮಾದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಪ್ರತಿಕ್ರಿಯಿಸಿದ್ದು "ಚಿತ್ರೀಕರಣ ಪ್ರಗತಿಯಲ್ಲಿದೆ. ನಾನು ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ" ಎಂದಿದ್ದಾರೆ. ದಕ್ಷಿಣ ಭಾರತದ ಯಾವುದಾದರೂ ನಟನನ್ನು ನಟನೆಗೆ ಕೇಳಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಅವರು "ಇಲ್ಲ" ಎಂದು ಉತ್ತರಿಸಿದ್ದಾರೆ.
ಈಗ ಸದ್ಯಕ್ಕೆ ಇವೆಲ್ಲವೂ ವದಂತಿ ಎಂದು ನಂಬಲಾಗಿದ್ದು, ಸ್ಪಷ್ಟತೆಗಾಗಿ ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ.
ಸುದೀಪ್ ಬಾಲಿವುಡ್ ಗೆ ಹೊಸಬರೇನಲ್ಲ. ಈ ಹಿಂದೆ ಅವರು 'ಫೂನ್ಕ್', 'ರಣ್', 'ಫೂನ್ಕ್-2', 'ರಕ್ತಚರಿತ್ರ' ಹಿಂದಿ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರು ರಾಜಮೌಳಿ ನಿರ್ದೇಶನದ ತೆಲುಗು ಸಿನೆಮಾ 'ಈಗ' ದಲ್ಲಿ ಕೂಡ ನಟಿಸಿದ್ದು ಅದು ಹಿಂದಿಯಲ್ಲಿ 'ಮಕ್ಕಿ'ಯಾಗಿ ಬಿಡುಗಡೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


