ಸಲ್ಮಾನ್'ಖಾನ್' ರನ್ನು ಕಾಶ್ಮೀರ ಪ್ರವಾಸೋದ್ಯಮ ರಾಯಭಾರಿ ಮಾಡಲು ಇಚ್ಛಿಸುತ್ತೇನೆ: ಸಿಎಂ ಮೆಹಬೂಬಾ
ಜಮ್ಮು ಮತ್ತು ಕಾಶ್ಮೀರದಲ್ಲೀಗ ರಾಜಕೀಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರವಾಸಿಗರಿಗೆ ರಾಜ್ಯ ಸುರಕ್ಷಿತವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶುಕ್ರವಾರ ಹೇಳಿದ್ದಾರೆ...

Published On :
ಮುಂಬೈ: ಜಮ್ಮು ಮತ್ತು ಕಾಶ್ಮೀರದಲ್ಲೀಗ ರಾಜಕೀಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರವಾಸಿಗರಿಗೆ ರಾಜ್ಯ ಸುರಕ್ಷಿತವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶುಕ್ರವಾರ ಹೇಳಿದ್ದಾರೆ.
ಕಾಶ್ಮೀರ ರಾಜ್ಯದ ಪ್ರವಾಸೋದ್ಯಮ ಪ್ರಚಾರಾರ್ಥವಾಗಿ ಪ್ರಸ್ತುತ ಮೆಹಬೂಬಾ ಮುಫ್ತಿಯವರು ಮುಂಬೈನಲ್ಲಿದ್ದಾರೆ. ಚಿತ್ರ ನಿರ್ದೇಶಕನಾಗಿರುವ ನಟ ಇಮ್ರಾನ್ ಖಾನ್ ಅವರ ಸರ್ ಗೊಶಿಯಾಂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅವರು, ಮುಂಬೈ ಜನತೆ ಈ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬೇಕೆಂದು ಕರೆ ನೀಡಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮದ ರಾಯಭಾರಿಯಾಗಿ ಬಾಲಿವುಡ್ ನ ಯಾವ ನಟರನ್ನು ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಆ ರೀತಿಯ ಆವಕಾಶ ಸಿಕ್ಕಿದ್ದೇ ಆದರೆ, ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮವನ್ನು ಪ್ರಚುರಪಡಿಸಲು ನಾನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ.
ಪ್ರಸ್ತುತ ವರ್ಷದ ಚಳಿಗಾಲದಲ್ಲಿ ಜಮ್ಮು ಕಾಶ್ಮೀರ ಸರ್ಕಾರವು ಏಷ್ಯಾದ ಅತೀ ದೊಡ್ಡ ಟ್ಯುಲಿಪ್ ಗಾರ್ಡನ್ ಇರುವ ಶ್ರೀನಗರದಲ್ಲಿ ಟ್ಯುಲಿಪ್ ಉತ್ಸವವನ್ನು ಏರ್ಪಡಿಸಲು ಉದ್ದೇಶಿಸಿದೆ. ಈ ಉತ್ಸವಕ್ಕೆ ನಿಮೆಗಲ್ಲರಿಗೂ ನಾನು ಈಗಲೇ ಆಹ್ವಾನವನ್ನು ನೀಡುತ್ತಿದ್ದೇನೆ. ಕಾಶ್ಮೀರಕ್ಕೆ ನೀವೆಲ್ಲಾ ಭೇಟಿ ಕೊಡಿ. ನಮ್ಮ ರಾಜ್ಯ ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ಹಿರಿಯ ಕಲಾವಿದರಾದ ಫರೀದಾ ಜಲಾಲ್, ಅಲೋಕ್ ನಾಥ್, ರಾಜಾ ಮುರಾದ್, ಕೌಶಲ್ ಟಂಡನ್ ಮತ್ತು ದೀಪ್'ಶಿಖಾ ಸೇರಿದಂತೆ ಹಲವು ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Salman Khanಸಲ್ಮಾನ್ ಖಾನ್ಜಮ್ಮು ಮತ್ತು ಕಾಶ್ಮೀರJammu and KashmirರಾಯಭಾರಿTourismಪ್ರವಾಸೋದ್ಯಮMehbooba Muftiಮೆಹಬೂಬಾ ಮುಫ್ತಿbrand ambassador
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


