ರಜನಿ ಸರ್ ಅವರಿಂದ ಪ್ರಶಂಸೆಯೇ ನನಗೆ ವಿಶ್ವ: ಅರುಣ್ ವಿಜಯ್
'ಕುತ್ರಂ ೨೩' ಸಿನೆಮಾ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ನಟ ಅರುಣ್ ವಿಜಯ್ ಅವರಿಗೆ ಕರೆ ಮಾಡಿ ಅಭಿನಿಂದಿಸಿದಾಗ ನನ್ನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ ಎನ್ನುತ್ತಾರೆ ನಟ.

Published On :
ಚೆನ್ನೈ: 'ಕುಟ್ಟ್ರಮ್ ೨೩' ಸಿನೆಮಾ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ನಟ ಅರುಣ್ ವಿಜಯ್ ಅವರಿಗೆ ಕರೆ ಮಾಡಿ ಅಭಿನಿಂದಿಸಿದಾಗ ನನ್ನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ ಎನ್ನುತ್ತಾರೆ ನಟ. ಅವರ ಪ್ರಶಂಸೆಯೇ ನನಗೆ ವಿಶ್ವ ಎಂದಿದ್ದಾರೆ.
"ಸೂಪರ್ ಸ್ಟಾರ್ ಕರೆ ಮಾಡಿ ನಿಮ್ಮ ಕೆಲಸಕ್ಕೆ ಅಭಿನಂದಿಸಿದಾಗ ನಿಮಗೆ ಗೌರವ ಸಿಕ್ಕಂತೆ. ನಾನು ಬೇರೆ ಯಾವುದೋ ಲೋಕದಲ್ಲಿ ತೇಲುತ್ತಿದ್ದಂತೆನಿಸಿತು ಮತ್ತು ರಜನಿ ಸರ್ ಅವರಿಂದ ಪ್ರಶಂಸೆಯೇ ನನಗೆ ವಿಶ್ವ" ಎಂದು ಅರುಣ್ ಹೇಳಿದ್ದಾರೆ.
ವಿಶೇಷ ಪ್ರದರ್ಶನದಲ್ಲಿ ಸಿನೆಮಾ ನೋಡಿದ ನಟ ರಜನಿಕಾಂತ್ ಇಡೀ ತಂಡವನ್ನು ಮನತುಂಬಿ ಹೊಗಳಿದ್ದಾರೆ. ಹಾಗೆಯೇ ಅರುಣ್, ನಿರ್ದೇಶಕ ಮತ್ತು ಸಿನೆಮಾದ ನಿರ್ಮಾಪಕರನ್ನು ಮನೆಗೆ ಆಹ್ವಾನಿಸಿದ್ದಾರೆ.
ಕಾದಂಬರಿ ಆಧಾರಿತ ಈ ಸಿನೆಮಾ ನಿರ್ದೇಶಿಸಿರುವ ಅರಿವಜಗನ್, ವೈದ್ಯಕೀಯ ಅಪರಾಧಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


