ಸಿನಿಮಾ ಸುದ್ದಿ

ಮಹಿಳೆಯರಿಗೆ ತರಬೇತಿಯ ಅವಶ್ಯಕವಿದೆ: ಆರ್ ಜಿ ವಿ ಬೆನ್ನಿಗೆ ನಿಂತ ರಾಖಿ ಸಾವಂತ್

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶುಭಕೋರುವ ಸಲುವಾಗಿ ಟ್ವೀಟ್‌ ಮಾಡಿ, ವಿವಾದ ಸೃಷ್ಟಿಸಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರ ಹೇಳಿಕೆ ..

ಮಹಿಳೆಯರಿಗೆ ತರಬೇತಿಯ ಅವಶ್ಯಕವಿದೆ: ಆರ್ ಜಿ ವಿ ಬೆನ್ನಿಗೆ ನಿಂತ ರಾಖಿ ಸಾವಂತ್
ರಾಮ್ ಗೋಪಾಲ್ ವರ್ಮಾ ಮತ್ತು ರಾಖಿ ಸಾವಂತ್
Published On :

ಮುಂಬಯಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶುಭಕೋರುವ ಸಲುವಾಗಿ ಟ್ವೀಟ್‌ ಮಾಡಿ, ವಿವಾದ ಸೃಷ್ಟಿಸಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರ ಹೇಳಿಕೆ ಸರಿಯಿದೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ.

ಎಲ್ಲಾ ಮಹಿಳೆಯರೂ ಪುರುಷರಿಗೆ ಸನ್ನಿಲಿಯೋನ್‌ಗಿಂತ ಹೆಚ್ಚು ಸಂತಸ ನೀಡಲಿ ಎಂದು ಆರ್ ಜಿವಿ ಟ್ವೀಟ್ ಮಾಡಿದ್ದು ಸರಿಯಿದೆ. ರಾಮ್ ಗೋಪಾಲ್ ವರ್ಮಾ ಏನು ಹೇಳಿದ್ದಾರೋ ಅದು ಸತ್ಯ. ನಾನು ಅವರನ್ನ ಬೆಂಬಲಿಸುತ್ತೇನೆ. ಒಬ್ಬ ವ್ಯಕ್ತಿ ತನ್ನ ಪತ್ನಿ ಜೊತೆ ಹಲವು ವರ್ಷ ಸಂಸಾರ ನಡೆಸುತ್ತಾನೆ. ಪತ್ನಿ ಜೀವನ ಪರ್ಯಂತ ಅವನ ಮಾಡುತ್ತಾಳೆ. ಹೀಗಾಗಿ  ಒಬ್ಬ ಮಹಿಳೆ ತನ್ನ ಗಂಡನನ್ನು ಹೇಗೆ ಸಂತೋಷ ಪಡಿಸಬೇಕು ಎಂಬುದನ್ನು ಕಲಿತುಕೊಳ್ಳಬೇಕು ಎಂದು ರಾಖಿ ಹೇಳಿದ್ದಾರೆ.
 
ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿ ಮಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಮಹಿಳಾ ದಿನಾಚರಣೆಯಂದೇ ಮಹಿಳೆಯರ ಕಣ್ಣು ಕೆಂಪಾಗಿಸಿದ್ದರು. ಎಲ್ಲಾ ಮಹಿಳೆಯರೂ ಪುರುಷರಿಗೆ ಸನ್ನಿಲಿಯೋನ್‌ಗಿಂತ ಹೆಚ್ಚು ಸಂತಸ ನೀಡಲಿ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಬಳಿಕ, ಎಚ್ಚೆತ್ತುಕೊಂಡ ಅವರು ‘ಸನ್ನಿ ಲಿಯೋನ್‌ ಇತರ ಮಹಿಳೆಯರಿಗಿಂತ ಹೆಚ್ಚು ಪ್ರಾಮಾಣಿಕವಾಗಿದ್ದಾರೆ’ ಎಂದು ಮತ್ತೊಂದು ಟ್ವೀಟ್‌ ಮಾಡಿ ತಮ್ಮ ಮೊದಲ ಟ್ವೀಟ್‌ಅನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಈ ಸಂಬಂಧ ಮಹಿಳಾ ಪರ ಹೋರಾಟಗಾರ್ತಿ ವಿಶಾಖ ಮಾಂಬ್ರೆ ಅವರು ಗೋವಾದಲ್ಲಿ ವರ್ಮಾ ಅವರ  ವಿರುದ್ಧ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಕ್ಷಮೆ ಯಾಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.