ಸಿನಿಮಾ ಸುದ್ದಿ

ಆಕ್ಷನ್ ಸಿನೆಮಾಗೆ ಒಂದಾದ ನಟ ಹೃತಿಕ್ ರೋಷನ್ - ನಿರ್ದೇಶಕ್ ಕಬೀರ್ ಖಾನ್

ವಿರಾಮಕ್ಕಾಗಿ ವಿದೇಶಕ್ಕೆ ತೆರಳಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದಿರುಗಿದ್ದು, ಮುಂದಿನ ಸಿನೆಮಾಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿರುವ

ಆಕ್ಷನ್ ಸಿನೆಮಾಗೆ ಒಂದಾದ ನಟ ಹೃತಿಕ್ ರೋಷನ್ - ನಿರ್ದೇಶಕ್ ಕಬೀರ್ ಖಾನ್
ಬಾಲಿವುಡ್ ನಟ ಹೃತಿಕ್ ರೋಷನ್
Published On :
ಮುಂಬೈ: ವಿರಾಮಕ್ಕಾಗಿ ವಿದೇಶಕ್ಕೆ ತೆರಳಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದಿರುಗಿದ್ದು, ಮುಂದಿನ ಸಿನೆಮಾಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿರುವ ಈ ಆಕ್ಷನ್ ಸಿನೆಮಾವನ್ನು ಸ್ಟಾರ್ ನಿರ್ದೇಶಕ ಕಬೀರ್ ಖಾನ್ ನಿರ್ದೇಶಿಸಲಿದ್ದಾರೆ. 
ಹಾಲಿವುಡ್ ಸಿನೆಮಾ ಮಿಷನ್ ಇಂಪಾಸಿಬಲ್ ಸಾಲಿನಲ್ಲಿ ನಿಲ್ಲಬಹುದಾದ ಬೃಹತ್ ಆಕ್ಷನ್ ಸಿನೆಮಾ ಮಾಡಲು ಕಬೀರ್ ಖಾನ್ ಮುಂದಾಗಿದ್ದಾರೆ. ಇದಕ್ಕಾಗಿ ಕೆಲವು ತಿಂಗಳುಗಳಿಂದ ಹೃತಿಕ್ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ. 
ಮೊದಲಿಗೆ ನಿಗದಿಯಾದಂತೆ ಕಬೀರ್ ನಿರ್ದೇಶನದ 'ಭಜರಂಗಿ ಭಾಯಿಜಾನ್' ಬಿಡುಗಡೆಯ ನಂತರವೇ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು ಆದರೆ ಹೃತಿಕ್ ಅವರು 'ಮೊಹೆಂಜೊ ದಾರೋ'ದಲ್ಲಿ ನಿರತರಾಗಿದ್ದು, ಸುದೀರ್ಘ ತಡವಾಯಿತು ಎನ್ನಲಾಗಿದೆ. 
ಇವೊತ್ತಿನ ಸಮಯಕ್ಕೆ ಖಾನ್ ಅವರು ಸ್ಕ್ರಿಪ್ಟ್ ಅನ್ನು ಮತ್ತಷ್ಟು ತಿದ್ದಬೇಕಿದೆ ಮತ್ತು ಅವರು ಫ್ಯಾಂಟಮ್ ನಿರ್ಮಾಣದ ಮಹತ್ವಾಕಾಂಕ್ಷೆ ಯೋಜನೆ '೧೯೮೩ ಕ್ರಿಕೆಟ್ ವರ್ಲ್ಡ್ ಕಪ್' ನಿರ್ದೇಶನಕ್ಕೂ ಮುಂಚೆ ಇದನ್ನು ಮುಗಿಸಲಿದ್ದಾರೆ ಎಂದು ತಿಳಿದುಬಂದಿದೆ. 
ಇನ್ನು ಹೆಸರಿಡದ ಈ ಚಿತ್ರ ಈ ವರ್ಷ ಸೆಪ್ಟೆಂಬರ್ ನಿಂದ ಚಿತ್ರೀಕರಣಗೊಳ್ಳಲಿದೆ. ಈ ಮಧ್ಯೆ ವಯಕಾಮ್೧೮ ಸಂಸ್ಥೆಯೊಂದಿಗೆ ೩ ಸಿನೆಮಾಗ ಡೀಲ್ ಗಾಗಿ ನಟ ಹೃತಿಕ್ ಮಾತುಕತೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.