ಚೊಚ್ಚಲ ಸಿನೆಮಾದ ಬಗ್ಗೆ ಪಾಯಲ್ ಅತೀವ ಸಂತಸ
ನಟಿಯಾಗುವ ಆಸೆ ಹೊತ್ತು ಬಂದ ಮಾಡೆಲ್ ಗಳಲ್ಲಿ ಪಾಯಲ್ ರಾಧಾಕೃಷ್ಣ ಕೂಡ ಒಬ್ಬರು. ಈಗ ಅವರ ಕನಸು ಪಿ ಎನ್ ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್ ವರ್ಲ್ಡ್' ಸಿನೆಮಾದ ಮೂಲಕ ನನಸಾಗಿದೆ.

Published On :
ಬೆಂಗಳೂರು: ನಟಿಯಾಗುವ ಆಸೆ ಹೊತ್ತು ಬಂದ ಮಾಡೆಲ್ ಗಳಲ್ಲಿ ಪಾಯಲ್ ರಾಧಾಕೃಷ್ಣ ಕೂಡ ಒಬ್ಬರು. ಈಗ ಅವರ ಕನಸು ಪಿ ಎನ್ ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್ ವರ್ಲ್ಡ್' ಸಿನೆಮಾದ ಮೂಲಕ ನನಸಾಗಿದೆ. ಚೊಚ್ಚಲ ನಟಿ, ಆದಿತ್ಯ ಎದುರು ನಟಿಸಿದ್ದಾರೆ.
ಈ ವಾರ ಬಿಡುಗಡೆಗೆ ಸಿದ್ಧವಾಗಿರುವ ಸಿನೆಮಾದಲ್ಲಿ ನಟಿಸಿರುವುದರ ಬಗ್ಗೆ ಅನಿಸಿಕೆ ಹಂಚಿಕೊಳ್ಳುವ ನಟಿ "ಮೊದಲನೆಯದ್ದು ಏನೇ ಆದರೂ ಅದು ವಿಶೇಷವಾಗಿರುತ್ತದೆ" ಎನ್ನುತ್ತಾರೆ. "ನಾನು ಮೊದಲ ಬಾರಿ ರಾಂಪ್ ಮೇಲೆ ನಡೆದದ್ದು ನನಗೆ ಇನ್ನು ನೆನಪಿದೆ ಮತ್ತು ಆಗ ಮಿಸ್ ಮೈಸೂರು ೨೦೧೫ ಸ್ಪರ್ಧೆ ಗೆದ್ದಿದ್ದೆ.
"ನನ್ನ ಮೊದಲ ಸಿನೆಮಾ ಕೂಡ ಯಶಸ್ಸು ತರುತ್ತದೆ ಎಂದು ನಂಬಿದ್ದೇನೆ. ನನಗೆ ಸಾಕಷ್ಟು ಉತ್ಸಾಹ ಇದೆ" ಎನ್ನುತ್ತಾರೆ ಪಾಯಲ್. ನಟಿ ದೀಪಿಕಾ ಪಡುಕೋಣೆ ಅವರ ಅತಿ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುವ ಅವರು "ನಾನು ಅವರಿಂದಲೇ ನಟನೆಗೆ ಬರಬೇಕು ಅಂದುಕೊಂಡದ್ದು. ಅದೃಷ್ಟವಶಾತ್ ಅವರು ಕೂಡ ಇಲ್ಲಿನವರೇ" ಎನ್ನುತ್ತಾರೆ.
೫.೮ ಅಡಿ ಎತ್ತರವಿರುವ ೨೦ ವರ್ಷದ ನಟಿ ತಮ್ಮ ಮಾಡೆಲಿಂಗ್ ದಿನಗಳಿಂದಲೂ ನಟಿಸುವುದಕ್ಕಾಗಿ ಅರಸುತ್ತಿದ್ದೆ ಎನ್ನುತ್ತಾರೆ "ನಾನು ಆ ಮಾರ್ಗಕ್ಕೆ ಹೊರಳಬೇಕು ಎಂದು ಸದಾ ಅನ್ನಿಸಿತ್ತು" ಎನ್ನುತ್ತಾರೆ.
"ನನಗೆ ಈ ಹಿಂದೆ ಹಲವು ಸಿನೆಮಾಗಳ ಅವಕಾಶ ಬಂದಿದ್ದವಾದರೂ, ಮೊದಲನೆಯದಕ್ಕೆ ಆಪ್ತವಾದ ಸಿನೆಮಾ ಎದುರು ನೋಡುತ್ತಿದೆ. 'ಬೆಂಗಳೂರು ಅಂಡರ್ ವರ್ಲ್ಡ್' ದೊಡ್ಡ ಸಿನೆಮಾದ ಭಾಗವಾಗಿರುವುದಕ್ಕೆ ಸಂತಸವಿದೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Adityaಆದಿತ್ಯPN Sathyaಬೆಂಗಳೂರು ಅಂಡರ್ ವರ್ಲ್ಡ್Paayal RadhakrishnaBengaluru underworldಪಾಯಲ್ ರಾಧಾಕೃಷ್ಣಪಿ ಎನ್ ಸತ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


