ಡಿಮಾನೆಟೈಸೇಶನ್ ಬವಣೆಗಳ ಬಗ್ಗೆ ಭಾರತಿರಾಜ್ ಸಿನೆಮಾ ಚಿತ್ರೀಕರಣ ಪ್ರಾರಂಭ
ಖ್ಯಾತ ತಮಿಳು ಚಿತ್ರನಿರ್ದೇಶಕ ಭಾರತಿರಾಜ್ ಅವರ ಮುಂದಿನ ತಮಿಳು ಸಿನೆಮಾ 'ನವೆಂಬರ್ ೮ ಇರವು ಎತ್ತು ಮಣಿ' (ನವೆಂಬರ್ ೮ ರಾತ್ರಿ ಎಂಟು ಘಂಟೆ) ಮಂಗಳವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ.

Published On :
ಚೆನ್ನೈ: ಖ್ಯಾತ ತಮಿಳು ಚಿತ್ರನಿರ್ದೇಶಕ ಭಾರತಿರಾಜ್ ಅವರ ಮುಂದಿನ ತಮಿಳು ಸಿನೆಮಾ 'ನವೆಂಬರ್ ೮ ಇರವು ಎತ್ತು ಮಣಿ' (ನವೆಂಬರ್ ೮ ರಾತ್ರಿ ಎಂಟು ಘಂಟೆ) ಮಂಗಳವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ. ಇದು ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ ಉಂಟಾದ ಬವಣೆಗಳ ಬಗೆಗಿನ ಚಿತ್ರ.
ಮುಖ್ಯ ಭೂಮಿಕೆಯಲ್ಲಿ ವಿದಾರ್ಥ್ ನಟಿಸಲಿದ್ದು, ಪ್ರಮುಖವಾಗಿ ಚೆನ್ನೈ ಮತ್ತು ಪುದುಚೆರಿಯಲ್ಲಿ ಚಿತ್ರೀಕರಣಗೊಳ್ಳಲಿದೆ.
"ನೋಟು ಹಿಂಪಡೆತ ನಿರ್ಧಾರದ ನಂತರ ನಡೆದ ಘಟನೆಗಳು ಕಥೆಯಲ್ಲಿ ಕಾಣಿಸಿಕೊಳ್ಳಲಿವೆ. ಇದು ವಿಡಂಬನಾ ಚಿತ್ರ. ಹಿರಿಯ ವ್ಯಕ್ತಿಯ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ. ಯಾರು ಸಿಗದಿದ್ದರೆ ಭಾರತಿರಾಜ ಅವರೇ ಅದನ್ನು ಮಾಡುವ ಸಾಧ್ಯತೆ ಇದೆ" ಎಂದು ಸಿನೆಮಾ ತಂಡದ ಮೂಲಗಳು ತಿಳಿಸಿವೆ.
ಎರಡು ತಿಂಗಳಲ್ಲಿ ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ರತ್ನಕುಮಾರ್ ಕಥೆ ಬರೆದಿದ್ದು, ಸಾಲೈ ಸಹದೇವಂ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.
"ಇಳಯರಾಜ ಅವರ ಜೊತೆಗೆ ಮಾತುಕತೆ ಜಾರಿಯಲ್ಲಿದ್ದು ಅವರು ಸಂಗೀತ ನೀಡುವ ಸಾಧ್ಯತೆಯಿದೆ" ಎನ್ನುತ್ತವೆ ಮೂಲಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
DemonetisationBharathirajaNovember 8... Iravu Ettu Maniಭಾರತಿರಾಜ್ನವೆಂಬರ್ ೮ ಇರವು ಎತ್ತು ಮಣಿಡಿಮಾನೆಟೈಸೇಶನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


