'ಮುಗುಳು ನಗೆ'ಗಾಗಿ ಗಿಟಾರ್ ಕಲಿತಿದ್ದು ವಿಶಿಷ್ಟ ಅನುಭವ: ನಿಖಿತಾ
ವಿನಯ್ ಪ್ರೀತಮ್ ಅವರ 'ಮಡಮಕ್ಕಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ನಿಖಿತಾ ನಾರಾಯಣ್ ಈಗ ತಮ್ಮ ಎರಡನೇ ಸಿನಿಮಾಗಾಗಿ ಸಾಕಷ್ಟು ಬದಲಾಗಬೇಕಾಯಿತು

Published On :
ಬೆಂಗಳೂರು: ವಿನಯ್ ಪ್ರೀತಮ್ ಅವರ 'ಮಡಮಕ್ಕಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ನಿಖಿತಾ ನಾರಾಯಣ್ ಈಗ ತಮ್ಮ ಎರಡನೇ ಸಿನಿಮಾಗಾಗಿ ಸಾಕಷ್ಟು ಬದಲಾಗಬೇಕಾಯಿತು ಮತ್ತು ನನ್ನ ತಾಳ್ಮೆಯನ್ನು ಪರೀಕ್ಷಿಸಿತು ಎನ್ನುತ್ತಾರೆ. ಇದು ದೂರಲ್ಲ ಎಂದು ಸ್ಪಷ್ಟಪಡಿಸುವ ನಟಿ, ಗಣೇಶ್ ಜೊತೆಗೆ ಯೋಗರಾಜ್ ಭಟ್ ಅವರ 'ಮುಗುಳು ನಗೆ'ಯಲ್ಲಿ ನಟಿಸಿದ್ದು ವಿಶಿಷ್ಟ ಅನುಭವ ಎನ್ನುತ್ತಾರೆ.
ಇದು ಮಾಮೂಲಿ ಚಿತ್ರೀಕರಣವಾಗಿರಲಿಲ್ಲ ಎನ್ನುವ ನಿಖಿತಾ, ಈ ಸಿನೆಮಾದಲ್ಲಿ ನಟಿಸುವುದಕ್ಕಾಗಿ ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಂಡಿದ್ದನ್ನು, ತಲೆಗೂದಲ ಬಣ್ಣ ಬದಲಾಯಿಸಿಕೊಂಡಿದ್ದನ್ನು, ಮತ್ತು ಗಿಟಾರ್ ಕಲಿತಿದ್ದನ್ನು ನೆನಪಿಸಿಕೊಳ್ಳುತ್ತಾರೆ.
"ತಲೆಗೂದಲ ಬಣ್ಣ ಬದಲಿಸುವುದು ನನ್ನ ತಾಳ್ಮೆಯನ್ನು ಪರೀಕ್ಷಿಸಿತಾದರೂ, ನನಗೆ ಬಹಳ ಖುಷಿ ತಂದದ್ದು ಗಿಟಾರ್ ಪಾಠಗಳು. ನನ್ನ ಪಾತ್ರಕ್ಕಾಗಿ ಗಿಟಾರ್ ಕಲಿಯಬೇಕು ಎಂದು ಚಿತ್ರೀಕರಣಕ್ಕೆ ಒಂದೂವರೆ ತಿಂಗಳ ಮುಂಚಿತವಾಗಿಯೇ ಭಟ್ರು ನನಗೆ ತಿಳಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡು ತರಬೇತಿಗೆ ಸೇರಿಕೊಂಡೆ. ಗಿಟಾರ್ ಕಲಿಯುವ ಆಸೆ ಮೊದಲಿನಿಂದಲೂ ಇತ್ತು. ಇದಕ್ಕೆ ಅವಕಾಶ ಮಾಡಿದೊಟ್ಟದ್ದು 'ಮುಗುಳು ನಗೆ'" ಎನ್ನುತ್ತಾರೆ ನಟಿ.
ನಿಖಿತಾ ತೆಲುಗಿನಲ್ಲಿ ಐದು ಸಿನೆಮಾಗಳಲ್ಲಿ ನಟಿಸಿ ಈಗ ಕನ್ನಡದಲ್ಲಿ ಎರಡನೇ ಸಿನೆಮಾ ಮುಗಿಸಿದ್ದಾರೆ. 'ಮುಗುಳು ನಗೆ'ಗೆ ಅವರೇ ಡಬ್ ಮಾಡುತ್ತಿರುವುದಾಗಿ ತಿಳಿಸುವ ನಿಖಿತಾ "ನಾನು ಮೊದಲ ಬಾರಿಗೆ ಡಬ್ ಮಾಡುತ್ತಿದ್ದೇನೆ ಮತ್ತು ಇದು ತ್ರಾಸದಾಯಕ" ಎನ್ನುತ್ತಾರೆ. "ಏಕೆಂದರೆ ಮತ್ತೆ ಆ ದೃಶ್ಯವನ್ನು ಮರುಕಳಿಸಬೇಕು, ಅದನ್ನು ನೆನಪಿಸಿಕೊಳ್ಳಬೇಕು. ಕಂಠ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸರಿಯಾಗಿ ಮೂಡದಿದ್ದರೆ ನಿಮ್ಮ ನಟನೆಯೆಲ್ಲ ವಿಫಲವಾಗುತ್ತದೆ" ಎನ್ನುತ್ತಾರೆ.
'ಮುಗುಳು ನಗೆ'ಯಲ್ಲಿ ನಿಖಿತಾ ಜೊತೆಗೆ, ಗಣೇಶ್ ನಟಿಸಿದ್ದು, ಅಪೂರ್ವ, ಆಶಿಕಾ ನಾರಾಯಣ್ ಮತ್ತು ಅಮೂಲ್ಯ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸುಜ್ಞಾನ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


