ಸಿನಿಮಾ ಸುದ್ದಿ

ಮುಂಬಯಿ: ನಟಿ ಕೃತಿಕಾ ಚೌಧರಿ ಕೊಳೆತ ಶವವಾಗಿ ಪತ್ತೆ

ಬಾಲಿವುಡ್ ನಟಿ ಕೃತಿಕಾ ಚೌಧರಿ ಅಂಧೇರಿ ಪಶ್ಚಿಮದಲ್ಲಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಅಂಧೇರಿ ತಮ್ಮ ಮನೆಯಲ್ಲಿ ಶವವಾಗಿ ...

ಮುಂಬಯಿ: ನಟಿ ಕೃತಿಕಾ ಚೌಧರಿ ಕೊಳೆತ ಶವವಾಗಿ ಪತ್ತೆ
ನಟಿ ಕೃತಿಕಾ ಚೌಧರಿ
Published On :
ಮುಂಬಯಿ: ಬಾಲಿವುಡ್ ನಟಿ ಕೃತಿಕಾ ಚೌಧರಿ ಅಂಧೇರಿ ಪಶ್ಚಿಮದಲ್ಲಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಅಂಧೇರಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. 
ಪೊಲೀಸರು ಇದೊಂದು ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾರೆ. ಸೋಮವಾರ ಬೆಳಗ್ಗೆ 3.45ರ ಸುಮಾರಿಗೆ ಅಕ್ಕ ಪಕ್ಕದ ಮನೆಯವರು ಮನೆಯಿಂದ ಹೊರ ಹೊಮ್ಮಿದ ಶವ ವಾಸನೆ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  
ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆ ಬಾಗಿಲು ಮುರಿದು ನೋಡಿದಾಗ ಕೃತಿಕಾ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.  3-4 ದಿನಗಳ ಹಿಂದೆ ಕೃತಿಕಾ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮೊದಲಿಗೆ ಅಂಬೋಲಿ ಪೊಲೀಸರು ಆಕಸ್ಮಿಕ ಸಾವು ಅಂತಾ ಪ್ರಕರಣ ದಾಖಲಿಸಿದ್ದರು. ತನಿಖೆಯಲ್ಲಿ ಹಲವಾರು ಶಂಕೆ ವ್ಯಕ್ತವಾಗಿರುವುದರಿಂದ ಇದೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹರಿದ್ವಾರ ಮೂಲದ ಕೃತಿಕಾ ಚೌಧರಿ ನಟಿ ಆಗ ಬಯಸಿ ಮುಂಬೈನಲ್ಲಿ ನೆಲೆಸಿದ್ದರು. ಕೆಲ ಹಿಂದಿ ಸಿನಿಮಾ ಸೀರಿಯಲ್‌ಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಬೆಳೆಯಲು ಯತ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.