ಸಿನಿಮಾ ಸುದ್ದಿ

ಮುಂಗಾರು ಮಳೆಯ ನಡುವೆಯೂ 'ಗರುಡ' ಬಿರುಸಿನ ಚಿತ್ರೀಕರಣ

ಸಿದ್ಧಾರ್ಥ್ ಮಹೇಶ್ ಮತ್ತು ಐಂದ್ರಿತಾ ರೇ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ 'ಗರುಡ' ಸಿನೆಮಾ ಗೋವಾದಲ್ಲಿ ೧೦ ದಿನಗಳಿಂದ ಚಿತ್ರೀಕರಣ ನಡೆಸುತ್ತಿದೆ. ಸಮುದ್ರ ತೀರದ ರಾಜ್ಯದಲ್ಲಿ ಚಿತ್ರತಂಡಕ್ಕೆ

ಮುಂಗಾರು ಮಳೆಯ ನಡುವೆಯೂ 'ಗರುಡ' ಬಿರುಸಿನ ಚಿತ್ರೀಕರಣ
'ಗರುಡ' ಸಿನೆಮಾದಲ್ಲಿ ಐಂದ್ರಿತಾ ರೇ
Published On :
ಬೆಂಗಳೂರು: ಸಿದ್ಧಾರ್ಥ್ ಮಹೇಶ್ ಮತ್ತು ಐಂದ್ರಿತಾ ರೇ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ 'ಗರುಡ' ಸಿನೆಮಾ ಗೋವಾದಲ್ಲಿ ೧೦ ದಿನಗಳಿಂದ ಚಿತ್ರೀಕರಣ ನಡೆಸುತ್ತಿದೆ. ಸಮುದ್ರ ತೀರದ ರಾಜ್ಯದಲ್ಲಿ ಚಿತ್ರತಂಡಕ್ಕೆ ಮೊದಲ ಮುಂಗಾರಿನ ಸಿಂಚನವು ಆಗಿದೆ. 
ಚಿತ್ರೀಕರಣದ ಬಗ್ಗೆ ಮಾತನಾಡುವ ಸಿದ್ಧಾರ್ಥ್ ಮಳೆಯಲ್ಲಿ ಸಾಹಸ ನಿರ್ದೇಶಕ ರವಿವರ್ಮಾ ಅವರ ಆಕ್ಷನ್ ದೃಶ್ಯಗಳು ಅತ್ಯುತ್ತಮವಾಗಿದ್ದವು ಎನ್ನುತ್ತಾರೆ. "ನಮ್ಮ ಚಿತ್ರದ ಚಿತ್ರೀಕರಣ ಉತ್ತಮವಾಗಿ ಪ್ರಾರಂಭವಾಯಿತು. ಭಾರಿ ಮಳೆ ನೋಡಿದೆವು. ನಾವು ಆಕ್ಷನ್ ದೃಶ್ಯಗಳನ್ನು ಮಾಡುತ್ತಿದ್ದೆವು. ರವಿವರ್ಮ ಈ ಮಳೆಯಲ್ಲಿಯೇ ಈ ದೃಶ್ಯಗಳ ಚಿತ್ರೀಕರಣಕ್ಕೆ ಅಣಿಯಾದರು. ಅವುಗಳು ಅತ್ಯುತ್ತಮವಾಗಿ ಮೂಡಿಬಂದಿವೆ" ಎನ್ನುತ್ತಾರೆ. 
ಮಳೆಯಿಂದ ಚಿತ್ರೀಕರಣ ಮುಂದೂಡಿದ್ದಾರೆ ಬಹಳ ವಿಳಂಬವಾಗುತ್ತಿತ್ತು ಎನ್ನುವ ಅವರು "ಮುಂಗಾರು ಮಳೆ ನಮ್ಮ ಚಿತ್ರೀಕರಣವನ್ನು ೧೦ ದಿನಗಳಿಗೆ ಮೊಟುಕುಗಳಿಸಿತಾದರೂ, ಬೆಂಗಳೂರು ಮತ್ತು ಮೈಸೂರು ಚಿತ್ರೀಕರಣ ನಂತರ ಮತ್ತೆ ಗೋವಾಗೆ ತೆರಳಿ ಚಿತ್ರೀಕರಣ ಮುಂದುವರೆಸುತ್ತೇವೆ" ಎನ್ನುತ್ತಾರೆ ಸಿದ್ದಾರ್ಥ್. 
ಈ ಸಿನೆಮಾದಲ್ಲಿ ಐಂದ್ರಿತಾ ಜೊತೆಗೆ ಆಶಿಕಾ ರಘುನಾಥ್ ಕೂಡ ಮತ್ತೊಬ್ಬ ನಾಯಕನಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.