೧೭ ವರ್ಷಗಳ ನಂತರ 'ಡಾನ್ ಕ್ವಿಕ್ಸೋಟ್' ಸಿನೆಮಾ ಚಿತ್ರೀಕರಣ ಮುಕ್ತಾಯ
ಪ್ರಾರಂಭವಾದ ೧೭ ವರ್ಷಗಳ ನಂತರ 'ದ ಮ್ಯಾನ್ ಹೂ ಕಿಲ್ಡ್ ಡಾನ್ ಕ್ವಿಕ್ಸೋಟ್' ಸಿನೆಮಾದ ಚಿತ್ರೀಕರಣವನ್ನು ಮುಗಿಸಿರುವುದಾಗಿ ನಟ, ಚಿತ್ರಕಥೆಗಾರ ಮತ್ತು ನಿರ್ದೇಶಕ ಟೆರ್ರಿ ಗಿಲ್ಲಿಯಮ್

Published On :
ಲಾಸೆಂಜಲಿಸ್: ಪ್ರಾರಂಭವಾದ ೧೭ ವರ್ಷಗಳ ನಂತರ 'ದ ಮ್ಯಾನ್ ಹೂ ಕಿಲ್ಡ್ ಡಾನ್ ಕ್ವಿಕ್ಸೋಟ್' ಸಿನೆಮಾದ ಚಿತ್ರೀಕರಣವನ್ನು ಮುಗಿಸಿರುವುದಾಗಿ ನಟ, ಚಿತ್ರಕಥೆಗಾರ ಮತ್ತು ನಿರ್ದೇಶಕ ಟೆರ್ರಿ ಗಿಲ್ಲಿಯಮ್ ಘೋಷಿಸಿದ್ದಾರೆ.
ಬರಹಗಾರ ಮಿಗುಯೆಲ್ ಡೇ ಸರ್ವಾಂಟೆಸ್ ಅವರ ಕಾದಂಬರಿ 'ಡಾನ್ ಕ್ವಿಕ್ಸೋಟ್' ಆಧಾರಿತ ಸಿನೆಮಾ ಹಲವು ಏರಿಳಿತಗಳನ್ನು ಕಂಡು ಮಧ್ಯದಲ್ಲಿ ನಿಂತುಹೋಗಿತ್ತು ಕೂಡ. ಈ ಸಿನೆಮಾ ಚಿತ್ರೀಕರಣದ ಬಗ್ಗೆಯೇ ೨೦೦೨ ರಲ್ಲಿ 'ಲಾಸ್ಟ್ ಇನ್ ಲಾ ಮಾಂಚ' ಎಂಬ ಸಾಕ್ಷ್ಯಚಿತ್ರ ಕೂಡ ಮೂಡಿಬಂದಿತ್ತು.
"ಸುದೀರ್ಘ ವಿಳಂಬವನ್ನು ಕ್ಷಮಿಸಿ. ಟ್ರಕ್ ಪ್ಯಾಕ್ ಮಾಡುವುದರಲ್ಲಿ ನಿರತನಾಗಿದ್ದೆ, ಈಗ ಮನೆ ಕಡೆಗೆ ಹೊರಟಿದ್ದೇನೆ. ೧೭ ವರ್ಷಗಳ ನಂತರ 'ದ ಮ್ಯಾನ್ ಹೂ ಕಿಲ್ಡ್ ಡಾನ್ ಕ್ವಿಕ್ಸೋಟ್' ಸಿನೆಮಾದ ಚಿತ್ರೀಕರಣ ಮುಗಿಸಿದ್ದೇನೆ" ಎಂದು ಗಿಲ್ಲಿಯಮ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
ಆಡಮ್ ಡ್ರೈವರ್, ಜೊನ್ಯಾಥನ್ ಪ್ರೈಸ್, ಸ್ಟೆಲ್ಲಾನ್ ಸ್ಕಾರ್ಸ್ಗಾರ್ಡ್, ವೋಲ್ಗ ಕುರಿಲೆಂಕೊ ಮತ್ತು ಮುಂತಾದವರು ನಟಿಸಿರುವ ಸಿನೆಮಾವನ್ನು ಸ್ಪೇನ್ ಮತ್ತು ಪೋರ್ಚುಗಲ್ ನ ವಿವಿಧ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


