ಕಾಫಿ ವಿತ್ ಕರಣ್: ಬಲವಂತವಾಗಿ ಭಾಗವಹಿಸಿದೆ; ಅಳಲು ತೋಡಿಕೊಂಡ ರಣ್ಬೀರ್ ಕಪೂರ್
ಕಾಫಿ ವಿತ್ ಕರಣ್ ಎಪಿಸೋಡ್ ಗೆ ಬಲವಂತವಾಗಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ರಣ್ಬೀರ್ ಅಳಲು ತೋಡಿಕೊಂಡಿದ್ದಾರೆ...

Published On :
ಮುಂಬಯಿ: ಬಾಲಿವುಡ್ ನಟ ರಣ್ಬೀರ್ ಕಪೂರ್ ತಮ್ಮ ವಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಸಾರ್ವಜನಿಕವಾಗಿ ಮಾತನಾಡುವುದಿಲ್ಲ, ಅದರಲ್ಲಿಯೂ ವಿಶೇಷವಾಗಿ ಸಾಮಾಜಿಕ ಮಾಧ್ಯಮದಿಂದ ತುಸು ದೂರವೇ ಉಳಿದಿದ್ದಾರೆ. ಆದರೆ ಇತ್ತೀಚೆಗೆ ಭಾಗವಹಿಸಿದ ಕಾಫಿ ವಿತ್ ಕರಣ್ ಎಪಿಸೋಡ್ ಗೆ ಬಲವಂತವಾಗಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ರಣ್ಬೀರ್ ಅಳಲು ತೋಡಿಕೊಂಡಿದ್ದಾರೆ.
ಕಾಫಿ ವಿತ್ ಕರಣ್ ಸೈಡ್ ಎಫೆಕ್ಟ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ರಣ್ಬೀರ್ ನನಗೆ ಈ ಸೀಸನ್ ನಲ್ಲಿ ಭಾಗಲಹಿಸಲು ಇಷ್ಟವಿರಲಿಲ್ಲ, ಆದರೆ ಒತ್ತಾಯಪೂರ್ವಕವಾಗಿ ನನ್ನನ್ನು ಕರೆದೊಯ್ಯಲಾಯಿತು.
ಕರಣ್ ಜೊತೆ ಮಾತನಾಡುವಾಗ ನಮ್ಮನ್ನು ಕಂಫರ್ಟ್ ಆಗರುವಂತೆ ನೋಡಿಕೊಳ್ಳುತ್ತಾರೆ, ಲಕ್ಷಾಂತರ ಜನ ನಮ್ಮ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ಅರ್ಥವಾಗುವುದಿಲ್ಲ, ಆದರೆ ನಂತರ ಆ ಮಾತುಗಳನ್ನು ತಿರುಚಲಾಗುತ್ತದೆ. ಕಾಫಿ ವಿಥ್ ಕರಣ್ ಕಾರ್ಯಕ್ರಮದಿಂದ ನಾನು ದಣಿದಿದ್ದೇನೆ. ನನಗೆ ಈ ಸೀಸನ್ ನಲ್ಲಿ ಭಾಗವಹಿಸಲು ಇಷ್ಟವಿಲ್ಲ ಎಂದು ನಾನು ಕರಣ್ ಗೆ ಹೇಳಿದ್ದೆ.
ಇದನ್ನು ನಿಲ್ಲಿಸಲು ನಾನು ಮತ್ತು ಅನುಷ್ಕಾ ಒಟ್ಟಿಗೆ ಪ್ರತಿಭಚನೆ ನಡೆಸುತ್ತೇವೆ. ಇದು ಸರಿಯಲ್ಲ, ನಮ್ಮನ್ನು ಬಳಸಿಕೊಂಡು ಆತ ಹಣ ಸಂಪಾದಿಸುತ್ತಿದ್ದಾನೆ. ಇದು ಸರಿಯಾದ ಕ್ರಮವಲ್ಲ ಎಂದು ರಣ್ಬೀರ್ ಬೇಸರ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


