ಚಿಟ್ಟೆ ಚಿತ್ರ ನನ್ನಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿವೆ: ಹರ್ಷಿಕಾ ಪೂಣಚ್ಚ
ನಟಿ ಹರ್ಷಿಕಾ ಪೂಣಚ್ಚ ತಮ್ಮ ಬಹುನಿರೀಕ್ಷಿತ ಚಿಟ್ಟೆ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿದ್ದು ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ...

Published On :
ನಟಿ ಹರ್ಷಿಕಾ ಪೂಣಚ್ಚ ತಮ್ಮ ಬಹುನಿರೀಕ್ಷಿತ ಚಿಟ್ಟೆ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿದ್ದು ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ತಮ್ಮ ಭಾಗದ ದೃಶ್ಯಗಳಿಗೆ ಮಾತು ಜೋಡಣೆ ಮಾಡಿರುವ ಹರ್ಷಿಕಾ ಪೂಣಚ್ಚ ಅವರಿಗೆ ಚಿತ್ರದ ಎಡಿಟಿಂಗ್ ಖುಷಿ ಕೊಟ್ಟಿದೆಯಂತೆ. ಚಿತ್ರದ ದೃಶ್ಯಗಳು ಮುದ ನೀಡುತ್ತಿವೆ. ಹೀಗಾಗಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲು ಉತ್ಸುಹಕಳಾಗಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರವನ್ನು ಎಲ್ ಪ್ರಕಾಶ್ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರ ಥ್ರಿಲ್ಲರ್ ಚಿತ್ರಕತೆ ಹೊಂದಿದ್ದು ಹೊಸದಾಗಿ ಮದುವೆಯಾದ ಜೋಡಿಯ ನಡುವಿನ ಪ್ರಸಂಗಗಳನ್ನು ಹೊಂದಿದೆ. ನಾನು ಯಶಸ್ ಗೆ ಜೋಡಿಯಾಗಿ ಅಭಿನಯಿಸಿದ್ದು ನನ್ನ ತುಂಟು ತನದ ಸವಿಯನ್ನು ಈ ಚಿತ್ರದಲ್ಲಿ ಅನುಭವಿಸಿದ್ದು ಈ ಚಿತ್ರ ನನಗೆ ವಿಶೇಷ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


