ಸಿನಿಮಾ ಸುದ್ದಿ

ಕುರುಕ್ಷೇತ್ರದಲ್ಲಿ ನಟಿಸಲು ಬರುತ್ತಿದ್ದಾರೆ ಪರಭಾಷಾ ನಟಿ!

ಸ್ಯಾಂಡಲ್ವುಡ್ ನ ಬಹುಕೋಟಿ ವೆಚ್ಚದ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಕ್ಕೆ ಹರಿಪ್ರಿಯ ಅವರು ಆಯ್ಕೆ ನಂತರ ಇದೀಗ ಮತ್ತೊಬ್ಬ ನಟಿಯನ್ನು ಚಿತ್ರ ತಂಡ ಆಯ್ಕೆ ಮಾಡಿದೆ...

ಕುರುಕ್ಷೇತ್ರದಲ್ಲಿ ನಟಿಸಲು ಬರುತ್ತಿದ್ದಾರೆ ಪರಭಾಷಾ ನಟಿ!
ರೆಜಿನಾ ಕಸ್ಸಂದ್ರ
Published On :
ಸ್ಯಾಂಡಲ್ವುಡ್ ನ ಬಹುಕೋಟಿ ವೆಚ್ಚದ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಕ್ಕೆ ಹರಿಪ್ರಿಯ ಅವರು ಆಯ್ಕೆ ನಂತರ ಇದೀಗ ಮತ್ತೊಬ್ಬ ನಟಿಯನ್ನು ಚಿತ್ರ ತಂಡ ಆಯ್ಕೆ ಮಾಡಿದೆ. 
ಈ ಬಾರಿ ತೆಲುಗಿನ ನಟಿ ರೆಜಿನಾ ಕಸ್ಸಂದ್ರ ಅವರು ಕುರುಕ್ಷೇತ್ರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಯಾವ ಪಾತ್ರದಲ್ಲಿ ನಟಿಸುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮಹಾಭಾರತದಲ್ಲಿ ದ್ರೌಪದಿ ಪಾತ್ರ ಮುಖ್ಯವಾಗಿದ್ದು ಅದೇ ಕಥಾವಸ್ತುವನ್ನು ಹೊಂದಿರುವ ಕುರುಕ್ಷೇತ್ರದಲ್ಲಿ ದ್ರೌಪದಿ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಖಾತ್ರಿಯಾಗಿಲ್ಲ. 
ರೆಜಿನಾ ಈ ಹಿಂದೆ ಕನ್ನಡದ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿದ್ದರು. ಇದೀಗ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸಲು ಸಮ್ಮತಿಸುವ ಮೂಲಕ ಎರಡನೇ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. 
ಇನ್ನು ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಶುರುವಾಗಲಿದೆ. ಐತಿಹಾಸಿಕ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ದೇಶಿಸಿದ್ದ ನಾಗಣ್ಣ ಅವರೇ ಕುರುಕ್ಷೇತ್ರ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.