ರಾಜಕೀಯ ಹೊಸ ಜವಾಬ್ದಾರಿ ಆದರೆ, ಚಿತ್ರರಂಗದಿಂದ ದೂರವಾಗಲ್ಲ: ಇಂದ್ರಜಿತ್ ಲಂಕೇಶ್
ಲಂಕೇಶ್ ಪತ್ರಿಕೆಯ ಸಂಪಾದಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಶೀಘ್ರದಲ್ಲಿಯೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದು, ಬಿಜೆಪಿ ಸೇರುವ ಕುರಿತುವ ಒಲವು ವ್ಯಕ್ತಪಡಿಸಿದ್ದಾರೆ...

Published On :
ಬೆಂಗಳೂರು: ಲಂಕೇಶ್ ಪತ್ರಿಕೆಯ ಸಂಪಾದಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಶೀಘ್ರದಲ್ಲಿಯೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದು, ಬಿಜೆಪಿ ಸೇರುವ ಕುರಿತುವ ಒಲವು ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪ್ರವೇಶ್ ಕುರಿತು ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಲು ಬಸವ ಕ್ರಾಂತಿ ವೇದಿಕೆ ವತಿಯಿಂದ ಆಯೋಜಿಸಿದ್ದ 'ಬಸವಣ್ಣನವರ ಹಾದಿಯಲ್ಲಿ ಜನನಾಯಕರು' ಎನ್ನುವ ಚಿಂತನಾ ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡರು,
25 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಮತ್ತು ಚಿತ್ರರಂಗದಲ್ಲಿದ್ದೆ. ಸುದೀರ್ಘ ಪಯಣದಲ್ಲಿ ಜನರ ಸಾಕಷ್ಟು ಪ್ರೀತಿ ಹಾಗೂ ವಾತ್ಸಲ್ಯವನ್ನು ಸಂಪಾದಿಸಿದ್ದೇನೆ. ರಾಜಕೀಯವೆಂಬುದು ಮತ್ತೊಂದು ಹೊಸ ಜವಾಬ್ದಾರಿಯಾಗಿದ್ದು, ಈ ಕ್ಷೇತ್ರದಲ್ಲಿ ನಾನು ಎಷ್ಟರ ಮಟ್ಟಿದೆ ಹೊಂದಿಕೊಳ್ಳಬಲ್ಲೆ ಎಂಬುದನ್ನು ತಿಳಿಯಬೇಕಿದೆ ಎಂದಿದ್ದಾರೆ.
ಬಿಜೆಪಿಯ ಸಿದ್ಧಾಂತಗಳ ಬಗ್ಗೆ ತಿಳಿದುಕೊಂಡಿದ್ದೇನೆ. ರಾಜಕೀಯ ಸೇರ್ಪಡೆಗೆ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಪ್ರೇರಣೆಯಾಗಿದೆ. ರಾಜಕೀಯ ಪ್ರವೇಶ ಕೇವಲ ಆಲೋಚನೆಯಷ್ಟೇ, ರಾಜಕೀಯ ಪ್ರವೇಶ ಕುರಿತು ಇಷ್ಟು ಬೇಗ ದೃಢೀಕರಣ ನೀಡಲು ಸಾಧ್ಯವಿಲ್ಲ. ರಾಜಕೀಯ ಹೊಸ ಜವಾಬ್ದಾರಿಯಾಗಿದ್ದು, ಚಿತ್ರರಂಗವನ್ನು ಬಿಡುವುದಿಲ್ಲ. ಶೀಘ್ರದಲ್ಲೇ ಹೊಸ ಚಿತ್ರದ ಕುರಿತಂತೆ ಮಾಹಿತಿಗಳನ್ನು ನೀಡುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


