ಸಿನಿಮಾ ಸುದ್ದಿ

ಖ್ಯಾತ ಹಿರಿಯ ನಟಿ ಸುಮಿತಾ ಸನ್ಯಾಲ್ ನಿಧನ!

ಖ್ಯಾತ ಬೆಂಗಾಲಿ ಹಿರಿಯ ನಟಿ ಸುಮಿತಾ ಸನ್ಯಾಲ್ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ 71 ವರ್ಷ ವಯಸ್ಸಾಗಿತ್ತು.

ಖ್ಯಾತ ಹಿರಿಯ ನಟಿ ಸುಮಿತಾ ಸನ್ಯಾಲ್ ನಿಧನ!
ಸಂಗ್ರಹ ಚಿತ್ರ
Published On :

ಕೋಲ್ಕತಾ: ಖ್ಯಾತ ಬೆಂಗಾಲಿ ಹಿರಿಯ ನಟಿ ಸುಮಿತಾ ಸನ್ಯಾಲ್ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ 71 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಿತಾ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 1945 ಅಕ್ಟೋಬರ್ 9ರಂದು ಜನಿಸಿದ ಸುಮಿತಾ ಅವರು ತಾಯಿ ಹೆಸರು  ಮಂಜುಳಾ ಸನ್ಯಾಲ್ ಮತ್ತು ತಂದೆ ಗಿರಿಜಾ ಗೋಲ್ಕುಂಡ ಸನ್ಯಾಲ್ ಎಂದು. ಡಾರ್ಜಿಲಿಂಗ್ ನಲ್ಲಿ ಜನಿಸಿದ ಸುಮಿತಾ ಸನ್ಯಾಲ್ ಅವರು ಬೆಂಗಾಳಿ ಭಾಷೆಯ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ಹಿಂದಿಯ 5 ಚಿತ್ರಗಳಲ್ಲಿ  ನಟಿಸಿದ್ದಾರೆ.

1960ರಲ್ಲಿ ತೆರೆಕಂಡ ಖೋಕಾ ಬಾಬುರ್ ಪ್ರತ್ಯಾಬರ್ತನ್ ಎಂಬ ಬೆಂಗಾಲಿ ಚಿತ್ರದಲ್ಲಿ ಮೊದಲ ಬಾರಿಗೆ ಸುಮಿತಾ ಅವರು ಬಣ್ಣ ಹಚ್ಚಿದ್ದರು. ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ಸುಮಿತಾ ಅವರು, 1996ರಲ್ಲಿ ದಿ ಪೀಕಾಕ್ ಸ್ಪ್ರಿಂಗ್ ಎಂಬ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 1970ರಲ್ಲಿ ತೆರೆಕಂಡಿದ್ದ ಅಮಿತಾಬ್ ಬಚ್ಚನ್ ಅಭಿನಯದ ಆನಂದ್ ಚಿತ್ರದಲ್ಲಿ ಅವರ ನಾಯಕಿಯಾಗಿ ಅಭಿನಯಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ರಂಗಸಭಾ ಎಂಬ ನಾಟಕ ಸಂಸ್ಥೆಯನ್ನೂ ಕೂಡ ಸುಮಿತಾ ಅವರು ಕಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.