ಸಿನಿಮಾ ಸುದ್ದಿ

ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಚಾರ್ಲಿ' ರಿಮೇಕ್ ನಲ್ಲಿ ದಿಗಂತ್

ಹಿಂದಿ ಸಿನೆಮಾ 'ಟಿಕೆಟ್ ಟು ಬಾಲಿವುಡ್' ಚಿತ್ರೀಕರಣದ ವೇಳೆ ಗಾಯಗೊಂಡ ಕನ್ನಡ ನಟ ದಿಗಂತ್ ಸ್ವಲ್ಪ ಸಮಯದ ಕಾಲ ನಟನೆಯಿಂದ ದೂರವುಳಿದಿದ್ದರು. ಈಗ 'ಚೌಕ' ಸಿನೆಮಾ ಈ ವಾರ ಬಿಡುಗಡೆಯಾಗುವ

ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಚಾರ್ಲಿ' ರಿಮೇಕ್ ನಲ್ಲಿ ದಿಗಂತ್
ನಟ ದಿಗಂತ್
Published On :
ಬೆಂಗಳೂರು: ಹಿಂದಿ ಸಿನೆಮಾ 'ಟಿಕೆಟ್ ಟು ಬಾಲಿವುಡ್' ಚಿತ್ರೀಕರಣದ ವೇಳೆ ಗಾಯಗೊಂಡ ಕನ್ನಡ ನಟ ದಿಗಂತ್ ಸ್ವಲ್ಪ ಸಮಯದ ಕಾಲ ನಟನೆಯಿಂದ ದೂರವುಳಿದಿದ್ದರು. ಈಗ 'ಚೌಕ' ಸಿನೆಮಾ ಈ ವಾರ ಬಿಡುಗಡೆಯಾಗುವ ಮೂಲಕ ಹಿಂದಿರುಗಿದ್ದಾರೆ. ಒಂದು ವರ್ಷದ ಹಿಂದೆ ಅಮ್ಯಾರ ದಸ್ತೂರ್ ನಿರ್ದೇಶನ ಚಿತ್ರದ ಚಿತ್ರೀಕರಣದ ವೇಳೆ ದಿಗಂತ್ ಕಣ್ಣಿಗೆ ಗಾಯವಾಗಿತ್ತು. ಈಗ ಅವರ ಹೊಸ ಕನ್ನಡ ಚಿತ್ರದಲ್ಲಿ ನಟಿಸುವುದಕ್ಕೆ ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 
ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಚಾರ್ಲಿ' ಕನ್ನಡ ರಿಮೇಕ್ ಅನ್ನು ನಿರ್ಮಿಸುತ್ತಿರುವ ಹರ್ಷ ಎಂಟರ್ಟೈನ್ಮೆಂಟ್ಸ್ ನಿರ್ಮಾಣ ಸಂಸ್ಥೆ, ಈ ಸಿನೆಮಾದಲ್ಲಿ ದಿಗಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಧೃಢೀಕರಿಸಿದೆ. ಇದು ತಮ್ಮ ಮುಂದಿನ ಚಿತ್ರ ಎಂದು ನಟ ಕೂಡ ತಿಳಿಸಿದ್ದಾರೆ. ಈ ಮಧ್ಯೆ ೧೯೯೫ ರ ಕಥೆ ಹೊಂದಿರುವ 'ಚೌಕ' ಸಿನೆಮಾದಲ್ಲಿ ದಿಗಂತ್, ಪ್ರಿಯಾಮಣಿ ಎದುರು ನಟಿಸುತ್ತಿದ್ದಾರೆ. 
'ಚಾರ್ಲಿ' ಕನ್ನಡ ರಿಮೇಕ್ ಸಿನೆಮಾದ ನಿರ್ದೇಶಕ ಜಿ ಎನ್ ರುದ್ರೇಶ್. ಇವರ ಚೊಚ್ಚಲ ನಿರ್ದೇಶನದ 'ಹಾಯ್' ಈ ವಾರ ಬಿಡುಗಡೆಯಾಗಲಿದೆ. ಈ ಸಿನೆಮಾದ ನಾಯಕನಟಿಗಾಗಿ ಹುಡುಕಾಟ ಪ್ರಾರಂಭವಾಗಿದ್ದು, ನಂತರ ಮುಹೂರ್ತ ನಡೆಯಲಿದೆ. 
ಮಾರ್ಟಿನ್ ಪ್ರಾಕ್ಕತ್ ನಿರ್ದೇಶನದ ಮಲಯಾಳಂ ಸಿನೆಮಾ 'ಚಾರ್ಲಿ'ಯಲ್ಲಿ ಡಲ್ಕೆರ್ ಸಲ್ಮಾನ್ ಮತ್ತು ಪಾರ್ವತಿ ನಟಿಸಿದ್ದರು. ೨೦೧೫ ರಲ್ಲಿ ಬಿಡುಗಡೆಯಾದ ಈ ಸಿನೆಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.