ಮೂರು ಭಾಷೆಗಳಲ್ಲಿ 'ಮುಂತಿರಿವಲ್ಲಿಕಲ್ ..' ರಿಮೇಕ್; ಕನ್ನಡಕ್ಕೆ ರವಿಚಂದ್ರನ್?
ಒಪ್ಪಮ್ (೨೦೧೬) ಮತ್ತು ಪುಲಿಮುರುಗನ್ (೨೦೧೬) ನಂತರ ಈಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ಮಲಯಾಳಂ ಸಿನೆಮಾ

Published On :
ಬೆಂಗಳೂರು: ಒಪ್ಪಮ್ (೨೦೧೬) ಮತ್ತು ಪುಲಿಮುರುಗನ್ (೨೦೧೬) ನಂತರ ಈಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ಮಲಯಾಳಂ ಸಿನೆಮಾ ಈಗ ಉಳಿದ ದಕ್ಷಿಣ ಭಾರತ ಭಾಷೆಗಳಿಗೆ ರಿಮೇಕ್ ಆಗಲಿದೆ.
ನಿರ್ದೇಶಕ ಜಿಬು ಜಾಕಬ್ ಈ ಸಿನೆಮಾ ರಿಮೇಕ್ ಆಗುವುದರ ಬಗ್ಗೆ ಮಾತನಾಡಿದ್ದು
"ಹೌದು, ನಾನು ನಿರ್ಮಾಪಕರು ಮತ್ತು ಕಲಾವಿದರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಸದ್ಯಕ್ಕೆ ತೆಲುಗಿನಲ್ಲಿ ವೆಂಕಟೇಶ್ ಮತ್ತು ಕನ್ನಡದಲ್ಲಿ ರವಿಚಂದ್ರನ್ ಅವರನ್ನು ಒಳಗೊಳ್ಳುವ ಬಗ್ಗೆ ಚಿಂತಿಸುತ್ತಿದ್ದೇವೆ. ತಮಿಳು ಆವತರಿಣಿಕೆಯಲ್ಲಿ ರಜನಿಕಾಂತ್ ನಟಿಸಬೇಕೆಂಬುದು ನನ್ನ ಕನಸು. ಅದು ನನಸಾಗುವುದೋ ತಿಳಿದಿಲ್ಲ" ಎನ್ನುತ್ತಾರೆ.
ಈ ರಿಮೇಕ್ ಗಳನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಪ್ರಶ್ನೆಗೆ "ಅದರ ಬಗ್ಗೆ ಇನ್ನು ನಿರ್ಧರಿಸಿಲ್ಲ. ಆದರೆ ನಾನು ತಮಿಳು ಅವತರಿಣಿಕೆಯನ್ನೂ ನಿರ್ದೇಶಿಸಬಹುದು ಮತ್ತು ಇನ್ನೆರಡು ರಿಮೇಕ್ ಗಳನ್ನು ಬೇರೆಯವರು ನಿರ್ದೇಶಿಸಬಹುದು" ಎಂದು ಜಿಬು ತಿಳಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RavichandranMohanlalರವಿಚಂದ್ರನ್ಮೋಹನ್ ಲಾಲ್Munthirivallikal ThalirkkumbolJibu Jacobಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್ಜಿಬು ಜಾಕಬ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


