ರಜನಿ ಜತೆ ಅಭಿನಯಿಸಲು ನಾನು ಸಿದ್ಧ: ಕಮಲ್
70ರ ದಶಕದಲ್ಲಿ ಒಟ್ಟಾಗಿ ಅಭಿನಯಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಸ್ಟಾರ್ ನಟನಾ ಜೋಡಿ ಕಮಲ್ ಹಾಸನ್ ಮತ್ತು ರಜನಿಕಾಂತ್ ಮತ್ತೊಮ್ಮೆ ಒಂದಾಗಿ ನಟಿಸುವ ಸಾಧ್ಯತೆ...

Published On :
70ರ ದಶಕದಲ್ಲಿ ಒಟ್ಟಾಗಿ ಅಭಿನಯಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಸ್ಟಾರ್ ನಟನಾ ಜೋಡಿ ಕಮಲ್ ಹಾಸನ್ ಮತ್ತು ರಜನಿಕಾಂತ್ ಮತ್ತೊಮ್ಮೆ ಒಂದಾಗಿ ನಟಿಸುವ ಸಾಧ್ಯತೆ ಇದೆ.
1977ರ ಅವರಗಳ್ ಮತ್ತು 1979ರ ನಿನೈತಾಲೆ ಇನಿಕುಮ್ ಚಿತ್ರಗಳ ಭರ್ಜರಿ ಹಿಟ್ ಬಳಿಕ ಈ ಜೋಡಿ ಮುಂದೆ ಒಟ್ಟಾಗಿ ನಟಿಸಲಿಲ್ಲ. ಅಲ್ಲಿಂದ ಇಬ್ಬರ ನಡುವೆ ಸ್ಟಾರ್ ಗಿರಿ ಏರ್ಪಟಿತ್ತು.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಉಳಗನಾಯಗನ್ ಕಮಲ್ ಹಾಸನ್ ಅವರು ನಿರ್ದೇಶಕರು ರಜನಿ ಮತ್ತು ನನಗೆ ಸಮಾನ ಅರ್ಹತೆ ಇರುವ ಪಾತ್ರವನ್ನು ನೀಡಿದರೇ ರಜನಿ ಜತೆ ಅಭಿನಯಿಸಲು ನನ್ನದು ಏನು ಅಭ್ಯಂತರವಿಲ್ಲ ಎಂದರು ಹೇಳಿದರು.
ಅವರೊಂದಿಗೆ ನಟಿಸುವುದು ಹೊಸದೇನಲ್ಲ. ಇದಕ್ಕೂ ಮೊದಲು ನಾವು ಜತೆಯಾಗಿ ಅಭಿನಯಿಸಿದ್ದೇವೆ. ಒಂದೇ ಚಿತ್ರದಲ್ಲಿ ಅಭಿನಯಿಸಲು ನಮ್ಮಿಬ್ಬರನ್ನು ಎಷ್ಟು ಜನ ಕೇಳಿದ್ದಾರೆ? ನಮ್ಮ ಘನತೆಗೆ ತಕ್ಕಂತೆ ಸಂಭಾವನೆ ನೀಡಿದರೆ ಅಂತಹ ಚಿತ್ರದಲ್ಲಿ ನಾನು ಅಭಿನಯಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


