'ಫಿರಂಗಿ' ಸಿನೆಮಾದ ಮೂಲಕ ನಿರ್ಮಾಪಕನಾದ ಕಪಿಲ್ ಶರ್ಮ
ಖ್ಯಾತ ಕಿರುತೆರೆ ಹಿಂದಿ ರಿಯಾಲಿಟಿ ಹಾಸ್ಯ ಕಾರ್ಯಕ್ರಮದ ನಿರ್ವಾಹಕ ಮತ್ತು ಹಾಸ್ಯ ನಟ ಕಪಿಲ್ ಶರ್ಮ ಈಗ 'ಫಿರಂಗಿ' ಚಿತ್ರದ ಜೊತೆಗೆ ನಿರ್ಮಾಪಕರಾಗಲಿದ್ದಾರೆ.

Published On :
ಮುಂಬೈ: ಖ್ಯಾತ ಕಿರುತೆರೆ ಹಿಂದಿ ರಿಯಾಲಿಟಿ ಹಾಸ್ಯ ಕಾರ್ಯಕ್ರಮದ ನಿರ್ವಾಹಕ ಮತ್ತು ಹಾಸ್ಯ ನಟ ಕಪಿಲ್ ಶರ್ಮ ಈಗ 'ಫಿರಂಗಿ' ಚಿತ್ರದ ಜೊತೆಗೆ ನಿರ್ಮಾಪಕರಾಗಲಿದ್ದಾರೆ.
ಈ ಸಿನೆಮಾದಲ್ಲಿ ತಮ್ಮ ಪಾತ್ರಕ್ಕಾಗಿ ತೀವ್ರ ತರಬೇತಿ ಪಡೆಯುತ್ತಿರುವ ನಟ ಈ ಸುದ್ದಿಯನ್ನು ಶನಿವಾರ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ.
"ಬಾಲಿವುಡ್ ನಲ್ಲಿ ನಿರ್ಮಾಪಕನಾಗಿ ನನ್ನ ಮೊದಲ ಸಿನೆಮಾ 'ಫಿರಂಗಿ' ಶೀಘ್ರದಲ್ಲೇ ಬರಲಿದೆ... ನಿಮ್ಮೆಲ್ಲರ ಆಶೀರ್ವಾದ ಬೇಕು" ಎಂದು ೨೦೧೫ ರಲ್ಲಿ 'ಕಿಸ್ ಕಿಸ್ಕೊ ಪ್ಯಾರ್ ಕರೂ' ಸಿನೆಮಾದಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಕಪಿಲ್ ಟ್ವೀಟ್ ಮಾಡಿದ್ದಾರೆ.
ಸಿನೆಮಾದ ಬಗ್ಗೆ ಇನ್ನಿತರ ವಿವರಗಳು ತಿಳಿಯಬೇಕಿವೆ. 'ದ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್-೩'ರಲ್ಲಿ ಗೆದ್ದಾಗ ಕಪಿಲ್ ಬೆಳಕಿಗೆ ಬಂದಿದ್ದರು. ನಂತರ ಹಲವು ರಿಯಾಲಿಟಿ ಕಾರ್ಯಕರ್ಮಗಳನ್ನು ನಡೆಸಿಕೊಟ್ಟಿದ್ದರು. ಈಗ 'ದ ಕಪಿಲ್ ಶರ್ಮ ಶೋ' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


