ನಟಿಯ ಮೇಲೆ ಲೈಂಗಿಕ ದೌರ್ಜನ್ಯ: ಭೂಗತ ಲೋಕದ ಜೊತೆ ಮಾಲಿವುಡ್ ನಂಟು
ದಕ್ಷಿಣ ಭಾರತದ ಜನಪ್ರಿಯ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ನಂತರ ಮಲಯಾಳಂ ಚಿತ್ರೋದ್ಯಮದವರಿಗೆ(ಮಾಲಿವುಡ್)...

Published On :
ಕೊಚ್ಚಿ: ದಕ್ಷಿಣ ಭಾರತದ ಜನಪ್ರಿಯ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ನಂತರ ಮಲಯಾಳಂ ಚಿತ್ರೋದ್ಯಮದವರಿಗೆ(ಮಾಲಿವುಡ್) ಭೂಗತ ಲೋಕದ ಜೊತೆ ಇರುವ ನಂಟು ಬೆಳಕಿಗೆ ಬರುತ್ತಿದೆ.
ಈ ಘಟನೆ ನಡೆದ ಬಳಿಕ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಅಪರಾಧಿ ಹಿನ್ನೆಲೆಯವರು ಯಾಕೆ ಸಿನಿಮಾ ನಟ, ನಟಿಯರಿಗೆ ಹತ್ತಿರವಾಗುತ್ತಾರೆ ಮತ್ತು ಅವರ ಜೊತೆಯಿದ್ದು ಕೆಲಸ ಮಾಡುತ್ತಾರೆ ಎಂಬುದು.
ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಕೆಲವು ಮಹತ್ವದ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದ ಬಳಿಕ ಚಿತ್ರೋದ್ಯಮದ ಕೆಲವು ಪ್ರಮುಖರು ಆರೋಪಿ ಸುನಿಗೆ ಮಾಡಿರುವ ದೂರವಾಣಿ ಕರೆಗಳ ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಆರೋಪಿ ಜೊತೆ ಸಂಪರ್ಕದಲ್ಲಿದ್ದವರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಖ್ಯಾತ ಬರಹಗಾರ ಎನ್.ಎಸ್.ಮಾಧವನ್ ಬಹಿರಂಗವಾಗಿ ಮಾಲಿವುಡ್ ಗೆ ಭೂಗತ ಜಗತ್ತಿನ ಜೊತೆ ಇರುವ ಸಂಪರ್ಕವನ್ನು ಟೀಕಿಸಿದ್ದಾರೆ. ಫಿಲ್ಮ್ ಇಂಡಸ್ಟ್ರಿ ಮತ್ತು ಅಂಡರ್ ವಲ್ಡ್ರ್ ನಡುವಿನ ಅಪವಿತ್ರ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ವಿನಯನ್, ಪ್ರಮುಖ ಆರೋಪಿ ಸುನಿಲ್ ಕುಮಾರ್ ಈ ಹಿಂದೆ ಕೂಡ ಇದೇ ತರಹದ ಕೇಸುಗಳಲ್ಲಿ ಸಿಕ್ಕಿ ಹಾಕಿಕೊಂ ಡಿದ್ದ. ನಿರ್ಮಾಪಕ ಸುರೇಶ್ ಕುಮಾರ್ ಈ ಹಿಂದೆ ತಮ್ಮ ಪತ್ನಿಯನ್ನು ಸುನಿಲ್ ನಿಂದ ರಕ್ಷಿಸಿದ್ದರ ಬಗ್ಗೆ ವಿವರಿಸುತ್ತಾರೆ. ಅಂತಹ ಹಿನ್ನೆಲೆಯಿರುವ ವ್ಯಕ್ತಿ ಮೂರು ವರ್ಷಗಳವರೆಗೆ ನಟ ಮುಕೇಶ್ ಗೆ ಕಾರು ಚಾಲಕನಾಗಿ ಹೇಗೆ ಕೆಲಸ ಮಾಡಿದ? ಆತನನ್ನು ಅಷ್ಟು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯವರ ಜೊತೆ ಕೆಲಸ ಮಾಡಲು ಏಕೆ ಬಿಡಲಾಯಿತು ಎಂದು ಸುರೇಶ್ ಕೇಳುತ್ತಾರೆ.
ಪೊಲೀಸರ ಪ್ರಕಾರ, ಸುನಿಲ್ ಅಲಿಯಾಸ್ ಪಲ್ಸರ್ ಸುನಿ ತಿಂಗಳ ಹಿಂದೆ ಮಲಯಾಳಂ ಚಿತ್ರವೊಂದರಲ್ಲಿ ಗೋವಾದಲ್ಲಿ ಪ್ರೊಡಕ್ಷನ್ ಯೂನಿಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ನಟಿಯನ್ನು ಅಪಹರಿಸಲು ಸಂಚು ರೂಪಿಸಿದ್ದನು. ಗೋವಾದಲ್ಲಿ ನಟಿಯ ಜೊತೆ ತುಂಬ ಒಳ್ಳೆಯವನಂತೆ ನಟಿಸಿ ಹತ್ತಿರವಾಗಲು ನೋಡಿದ್ದನು. ಆಕೆಯ ಜೊತೆ ಫೋಟೋ ತೆಗೆಸಿಕೊಂಡು ಅದನ್ನಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದನು. ಆ ಮೂಲಕ ನಟಿಯಿಂದ 30 ಲಕ್ಷ ರೂಪಾಯಿ ಹಣ ಕೊಳ್ಳೆ ಹೊಡೆಯುವ ಯೋಜನೆ ಮಾಡಿಕೊಂಡಿದ್ದನು ಎನ್ನುತ್ತಾರೆ ತನಿಖಾ ತಂಡದ ಅಧಿಕಾರಿಯೊಬ್ಬರು. ಇದೀಗ ಕಸ್ಟಡಿಯಲ್ಲಿರುವ ನಟಿಯ ಕಾರು ಚಾಲಕ ಮಾರ್ಟಿನ್, ಅಪಹರಣ ಯೋಜನೆಗೆ ಸಹಕರಿಸಿದರೆ ಬರುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ನೀಡುವುದಾಗಿ ಸುನಿಲ್ ಭರವಸೆ ನೀಡಿದ್ದನು ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಸುನಿಲ್ ಅಪರಾಧಿ ಎನ್ನುತ್ತಾರೆ ಮಲಯಾಳಂ ಚಿತ್ರ ತಾಂತ್ರಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೈಜು ಕೊಟ್ಟರಕ್ಕಾರ.
ಇದೊಂದೇ ಕೇಸು ಅಲ್ಲ, ಸುನಿ ಜೊತೆ ಸಂಪರ್ಕದಲ್ಲಿರುವ ನಿರ್ಮಾಣ ನಿಯಂತ್ರಕರನ್ನೆಲ್ಲಾ ತನಿಖೆ ಮಾಡಬೇಕು. ಚಿತ್ರೋ ದ್ಯಮವೆಂಬುದು ಅಪರಾಧಿಗಳಿಗೆ ಮತ್ತು ಮಾದಕ ವ್ಯಸನಿಗಳಿಗೆ ತವರು ಮನೆಯಂತಾಗಿದೆ ಎನ್ನುತ್ತಾರೆ.
ಯಾವ ನಟಿಯರಿಗೂ ಇಂತಹ ಪರಿಸ್ಥಿತಿಯುಂಟಾಗಬಾರದು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರ ಹಿನ್ನೆಲೆಯನ್ನು ಪರೀಕ್ಷಿಸಿದ ನಂತರವೇ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ(ಎಫ್ಎಎಫ್ ಕೆಎ) ಸದಸ್ಯತ್ವ ನೀಡಬೇಕು. ಶುಲ್ಕ ಕೊಟ್ಟವರೆಲ್ಲರಿಗೂ ಫಿಲ್ಮ್ ಫೆಡರೇಶನ್ ಸದಸ್ಯತ್ವ ಕೊಡಬಾರದು ಎನ್ನುತ್ತಾರೆ ಬೈಜು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


