ಸಿನಿಮಾ ಸುದ್ದಿ

ರೋಗ್ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿರುವ ಏಂಜೆಲಾ ಕ್ರಿಸ್ಲಿನ್ಜ್ಕಿ ಮತ್ತು ಮನ್ನಾರಾ ಚೋಪ್ರಾ

ತಮ್ಮ ಮುಂಬರುವ ದ್ವಿಭಾಷಾ ಚಿತ್ರ ರೋಗ್ ಬಗ್ಗೆ ನಿರ್ದೇಶಕ ಪುರಿ ಜಗನ್ನಾಥ್ ಸಾಕಷ್ಟು...

ರೋಗ್ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿರುವ ಏಂಜೆಲಾ ಕ್ರಿಸ್ಲಿನ್ಜ್ಕಿ ಮತ್ತು ಮನ್ನಾರಾ ಚೋಪ್ರಾ
ಏಂಜೆಲಾ ಕ್ರಿಸ್ಲಿನ್ಜ್ಕಿ ಮತ್ತು ಮನ್ನಾರಾ ಚೋಪ್ರಾ
Published On :
ತಮ್ಮ ಮುಂಬರುವ ದ್ವಿಭಾಷಾ ಚಿತ್ರ ರೋಗ್ ಬಗ್ಗೆ  ನಿರ್ದೇಶಕ ಪುರಿ ಜಗನ್ನಾಥ್ ಸಾಕಷ್ಟು ಕುತೂಹಲ ಸೃಷ್ಟಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರದ ನಾಯಕ ಇಶಾನ್ ತಲೆಕೆಳಗಾಗಿ ನೇತಾಡುತ್ತಿರುವ ಪೋಸ್ಟರ್ ನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ನಂತರ ನಿನ್ನೆ ಮೋಶನ್ ಪೋಸ್ಟರ್ ನ್ನು ಬಿಡುಗಡೆ ಮಾಡಿ ಪ್ರತಿಯೊಬ್ಬರ ದೃಷ್ಟಿ ಹರಿಯುವಂತೆ ಮಾಡಿದ್ದರು.
ರೋಗ್ ಮೂಲಕ ಮೊತ್ತ ಮೊದಲ ಬಾರಿಗೆ ಇಶಾನ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದರೆ, ನಾಯಕಿ ಪಾತ್ರಕ್ಕೆ ಏಂಜೆಲಾ ಕ್ರಿಸ್ಲಿನ್ಜ್ಕಿ ಅವರನ್ನು ಆರಿಸಿಕೊಂಡಿದ್ದಾರೆ. ಅವರ ಜೊತೆ ಮತ್ತೊಬ್ಬ ನಟಿ ಮನ್ನಾರಾ ಚೋಪ್ರಾ ತೆರೆ ಹಂಚಿಕೊಳ್ಳಲಿದ್ದಾರೆ.
ಮಾಡೆಲ್ ಕಂ ನಟಿ ಏಂಜೆಲಾ ತಮ್ಮ ಸಿನಿಮಾ ವೃತ್ತಿ ಜೀವನವನ್ನು ಪುರಿಯವರ ನಿರ್ದೇಶನದ ಜ್ಯೋತಿಲಕ್ಷ್ಮಿ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕುವ ಮೂಲಕ ಆರಂಭಿಸಿದ್ದರು. ಅನುಷ್ಕಾ ಶೆಟ್ಟಿ ಅಭಿನಯದ ಸೈಜ್ ಝೀರೋ ಚಿತ್ರದಲ್ಲಿ ಕೂಡ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಭಾರತ-ಪಾಲೆಂಡ್ ಮೂಲದ ಮನಃಶಾಸ್ತ್ರ ವಿದ್ಯಾರ್ಥಿನಿಯಾಗಿರುವ ನಟಿ ಏಂಜೆಲಾ ಲ್ಯಾಟಿನ್ ಮತ್ತು ಜಾಜ್ ನೃತ್ಯ ಪ್ರಕಾರಗಳನ್ನು ಕಲಿತಿದ್ದಾರೆ.
Story image
ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಮನ್ನಾರಾ ಟಾಲಿವುಡ್ ನಲ್ಲಿ ಚಿರಪರಿಚಿತರಾಗಿದ್ದು ಜಿದ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು.
ತನ್ವಿ ಫಿಲ್ಮ್ ಅಡಿ ತಯಾರಾಗುತ್ತಿರುವ ರೋಗ್ ಚಿತ್ರವನ್ನು ಸಿ.ಆರ್.ಮನೋಹರ್ ತಯಾರಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಆಡಿಯೊ ಲಾಂಚ್ ಮಾಡಿ ನಂತರ ವಿಶ್ವಾದ್ಯಂತ ಚಿತ್ರವನ್ನು ತೆರೆಗೆ ತರುವ ಯೋಜನೆ ಚಿತ್ರತಂಡದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.