ಸಿನಿಮಾ ಸುದ್ದಿ

ಹಾಲಿವುಡ್ ಮಾದರಿ ಸಿನೆಮಾ ಕೋರ್ಸ್ ಗೆ ವಿದೇಶಕ್ಕೆ ಹಾರಲಿರುವ ನಟ ಅನೂಪ್

'ಲಕ್ಷ್ಮಣ' ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜಕಾರಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಈಗ ಎಸ್ ನಾರಾಯಣ್ ನಿರ್ದೇಶನದ 'ಪಂಟ' ಬಿಡುಗಡೆಗೆ ಕಾಯುತ್ತಿದ್ದಾರೆ.

ಹಾಲಿವುಡ್ ಮಾದರಿ ಸಿನೆಮಾ ಕೋರ್ಸ್ ಗೆ ವಿದೇಶಕ್ಕೆ ಹಾರಲಿರುವ ನಟ ಅನೂಪ್
ಅನೂಪ್
Published On :
ಬೆಂಗಳೂರು: 'ಲಕ್ಷ್ಮಣ' ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜಕಾರಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಈಗ ಎಸ್ ನಾರಾಯಣ್ ನಿರ್ದೇಶನದ 'ಪಂಟ' ಬಿಡುಗಡೆಗೆ ಕಾಯುತ್ತಿದ್ದಾರೆ. 
ಈಮಧ್ಯೆ ನಟ ಸಿನೆಮಾ ಕೋರ್ಸ್ ಅಧ್ಯಯನ ಮಾಡಲು ವಿದೇಶಕ್ಕೆ ಹಾರಲಿದ್ದಾರೆ. "ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಮೂರೂ ತಿಂಗಳ ಕೋರ್ಸ್ ಸೇರಿದ್ದೇನೆ. ಅದು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ" ಎನ್ನುತ್ತಾರೆ ಅನೂಪ್. ಹಾಲಿವುಡ್ ಮಾದರಿಯ ಸಿನೆಮಾ ತಯಾರಿಕೆ ಕಲಿಯಲು ಅನೂಪ್ ಈ ಕೋರ್ಸ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸುತ್ತಾರೆ ನಟ.
"ಕಿರುಚಿತ್ರಗಳನ್ನು ಒಳಗೊಂಡಂತೆ ಸಾಕಷ್ಟು ಪ್ರಾಜೆಕ್ಟ್ ಕೆಲಸಗಳನ್ನು ಮಾಡಬೇಕು ಎಂದು ಕೇಳಿದ್ದೇನೆ. ರಂಗಭೂಮಿ, ಇತರ ಚಟುವಟಿಕೆಗಳು ಕೂಡ ಇರುತ್ತವಂತೆ. ಸ್ಟೋರಿ ಬೋರ್ಡ್ ಮೇಲೆ ಕೆಲಸ ಮಾಡಬೇಕಾಗುತ್ತದೆ, ಚಿತ್ರೀಕರಣ ಪೂರ್ವ ಕೆಲಸಗಳು, ನಿರ್ಮಾಪಕನನ್ನು ಹುಡುಕುವುದು ಇವೆಲ್ಲವನ್ನೂ ಕಲಿಯುವುದು ಸಾಧ್ಯ,. ಇದು ನನ್ನ ಕಲಿಕೆಯನ್ನು ಹೆಚ್ಚಿಸುತ್ತದೆ" ಎಂದಿದ್ದಾರೆ ಅನೂಪ್. 
ಈ ಕೋರ್ಸ್ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎನ್ನುವ ಅನೂಪ್ "ನನಗೆ ವುದೇ ಒಂದು ರೀತಿಯ ಪಾತ್ರಕ್ಕೆ ಸೀಮಿತಗೊಳ್ಳಲು ಇಷ್ಟವಿಲ್ಲ. ನನಗೆ ವೈವಿಧ್ಯ ಪಾತ್ರಗಳಲ್ಲಿ ತೊಡಗಿಸಿಕೊಳ್ಳುವುದು ಇಷ್ಟ. ಈ ಕೋರ್ಸ್ ನಲ್ಲಿ ನಡೆಸುವ ಚರ್ಚೆಗಳಿಂದ ಅದಕ್ಕೆ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಅನೂಪ್. 
"ನನಗೆ ನಟನೆಯಲ್ಲಿ ಕೋರ್ಸ್ ಮಾಡಲು ಆಸಕ್ತಿಯಿತ್ತು ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ಈ ಅವಕಾಶವನ್ನು ತಪ್ಪಿಸಿಕೊಂಡರೆ ಮತ್ತೆ ಸಿಗುವುದು ಕಷ್ಟ ಎಂದು ಅರಿತು ಈ ವಾರಾಂತ್ಯದಲ್ಲಿ ನ್ಯೂಯಾರ್ಕ್ ಕಡೆಗೆ ಪ್ರಯಾಣ ಬೆಳೆಸಿದ್ದೇನೆ" ಎನ್ನುತ್ತಾರೆ ಅನೂಪ್. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.