ಮೆಗಾ ಪ್ರಾಜೆಕ್ಟ್ ನಲ್ಲಿ ಸ್ಕ್ರೀನ್ ಹಂಚಿಕೊಳ್ಳಲಿರುವ ಚಿರಂಜೀವಿ ಮತ್ತು ಪವನ್ ಕಲ್ಯಾಣ್
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.ಈ ಮಲ್ಟಿಸ್ಟಾರರ್ ಚಿತ್ರಕ್ಕೆ ಮಾತಿನ ...

ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.ಈ ಮಲ್ಟಿಸ್ಟಾರರ್ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಲಿದ್ದಾರೆ.
ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಇಬ್ಬರೂ ಸೌತ್ ಸಿನಿಇಂಡಸ್ಟ್ರಿಯ ಸೂಪರ್ ಸ್ಟಾರ್ಗಳೇ. ಇಬ್ಬರಿಗೂ ಅವ್ರದ್ದೇ ಫ್ಯಾನ್ ಫಾಲೋಯಿಂಗ್ ಇದೆ. ಚಿರಂಜೀವಿ 10 ವರ್ಷ ಸಿನಿಮಾಗಳಿಂದ ದೂರವಾಗಿ ಮತ್ತೆ ಖೈದಿ ನಂಬರ್ 150 ಮೂಲಕ ಭರ್ಜರಿ ರೀಎಂಟ್ರಿ ಕೊಟ್ಟಿದ್ದಾರೆ.
ಚಿರು ಮತ್ತು ಪವನ್ ನಡುವೆ ಕೆಲದಿನಗಳಿಂದ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇಬ್ಬರು ಪ್ರತ್ಯೇಕ ರಾಜಕೀಯ ಪಕ್ಷ ಕಟ್ಟಿಕೊಂಡು ವಿಭಿನ್ನ ರೀತಿಯ ತತ್ವ ಆದರ್ಶಗಳನ್ನು ಇಟ್ಟುಕೊಂಡಿದ್ದರು. ಆದರೆ ಸಿನಿಮಾಗಾಗಿ ಎಲ್ಲವನ್ನು ಬದಿಗಿಟ್ಟು ಒಂದಾಗುತ್ತಿದ್ದಾರೆ.
ಚಿರಂಜೀವಿ ಅಭಿನಯದ ಶಂಕರ್ ದಾದಾ ಜಿಂದಾಬಾದ್ ಸಿನಿಮಾದಲ್ಲಿ ಪವನ್ ಗೆಸ್ಟ್ ರೋಲ್ ಪ್ಲೇ ಮಾಡಿದ್ದರು. ಅದಾದ ನಂತ್ರ ಈಗ ಇವರಿಬ್ಬರನ್ನ ಒಂದೇ ಸಿನಿಮಾದಲ್ಲಿ ನೋಡೊ ಅವಕಾಶ ಅವ್ರ ಅಭಿಮಾನಿಗಳಿಗೆ ಸಿಗಲಿದೆ. ಈ ಚಿತ್ರವನ್ನ ಖ್ಯಾತ ನಿರ್ಮಾಪಕ ಅಶ್ವಿನಿದತ್ ನಿರ್ಮಾಣ ಮಾಡಲಿದ್ದಾರೆ. ಟಿ. ಸುಬ್ಬಾರಾಮಿ ರೆಡ್ಡಿ ಚಿತ್ರದ ಸಹ ನಿರ್ಮಾಪಕರು.
ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರನ್ನು ತೆರೆಯ ಮೇಲೆ ಒಟ್ಟಿಗೆ ನೋಡುವುದು ಸುಬ್ಬಾರಾಮಿರೆಡ್ಡಿ ಅವರ ಬಹಳ ದಿನಗಳ ಕನಸಾಗಿತ್ತು.
ಸುಬ್ಬರಾಮಿ ರೆಡ್ಡಿ ಈ ಮೊದಲು ಶೋಬನ್ ರಾಜು, ರಜನಿಕಾಂತ್ ಮತ್ತು ಚಿರಂಜೀವಿ ಮುಂತಾದ ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


