ಒಂದೇ ಕುಟುಂಬದ ಮೂವರು ನಾಯಕರಿಗೆ ನಾಯಕಿ, ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ನೂತನ ದಾಖಲೆ
ಸ್ಯಾಂಡಲ್ ವುಡ್ ನ ಜನಪ್ರಿಯ ತಾರೆ ಹರಿಪ್ರಿಯಾ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಇದಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ಈ ನಟಿ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ....

Published On :
ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ತಾರೆ ಹರಿಪ್ರಿಯಾ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಇದಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ಈ ನಟಿ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಯಾವೊಬ್ಬ ನಟಿಯೂ ಮಾಡದ ಸಾಧನೆ ಮಾಡಿದ್ದಾರೆ.
ಒಂದೇ ಕುಟುಂಬದ ಮೂವರು ನಾಯಕರಿಗೆ ತಾನು ನಾಯಕಿಯಾಗಿ ಅಭಿನಯಿಸುವ ಮುಖೇನ ಹರಿಪ್ರಿಯಾ ಈ ಹಿಂದೆ ಯಾವ ಕನ್ನಡ ನಾಯಕಿಯರೂ ಮಾಡದ ಸಾಧನೆ ಮಾಡಿದ್ದಾರೆ.
ಸರ್ಜಾ ಕುಟುಂಬದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಅವರ ಜತೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಏಡಿರುವ ಹರಿಪ್ರಿಯಾ ಹೊಸ ಉತ್ಸಾಹದಲ್ಲಿದ್ದಾರೆ. ಕನ್ನಡದ ಬಹುಕೋಟಿ ಬಜೆಟ್ ಚಿತ್ರ 'ಕುರುಕ್ಷೇತ್ರ' ದಲ್ಲಿ ಅರ್ಜುನ್ ಸರ್ಜಾಗೆ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ಈ ಹಿಂದೆ ಧ್ರುವ ಸರ್ಜಾ ಜೊತೆಯಲ್ಲಿ 'ಭರ್ಜರಿ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೇ ವೇಳ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಕ್ಕೆ ಸಹ ಹರಿಪ್ರಿಯಾ ನಾಯಕಿಯಾಗಿರುವುದು ವಿಶೇಷ.
ಸದ್ಯ ಹರಿಪ್ರಿಯ ಕುರುಕ್ಷೇತ್ರ, ಸಂಹಾರ, ಸೂಜಿದಾರ, ಲೈಫ್ ಜೊತೆ ಒಂದ್ ಸೆಲ್ಫಿ ನಂತಹಾ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು ಇದರೊಡನೆ ತೆಲುಗು ಚಿತ್ರರಂಗರ ಖ್ಯಾತ ನಟ ಬಾಲಯ್ಯ ಅಭಿನಯದ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಕನ್ನಡ ನಟಿಯೊಬ್ಬರು ಇಂತಹಾ ಅಪರೂಪದ ಸಾಧನೆ ಮಾಡಿರುವುದು ಕನ್ನಡ್ ಚಿತ್ರಾಭಿಮಾನಿಗಳಿಗೆ ಅತ್ಯಂತ ಖುಷಿಯ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
arjun sarjaಅರ್ಜುನ್ ಸರ್ಜಾharipriyaDhruva sarjaಚಿರಂಜೀವಿ ಸರ್ಜಾChiranjeevi Sarjaಹರಿಪ್ರಿಯSarja Familyಸರ್ಜಾ ಕುಟುಂಬಧ್ರವ ಸರ್ಜಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


