ಸಿನಿಮಾ ಸುದ್ದಿ

ಬೆಂಗಳೂರು: ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ವಿವಾಹ

ದೀರ್ಘ ಕಾಲದ ಸ್ನೇಹಿತ ಮುಸ್ತಫಾ ರಾಜ್ ಜತೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ಪ್ರಿಯಾಮಣಿ ಬೆಂಗಳೂರಿನ ಜಯನಗರದ ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ.

ಬೆಂಗಳೂರು: ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ವಿವಾಹ
ಮುಸ್ತಫಾ ಜತೆ ಸಪ್ತಪದಿ ತುಳಿದ ಪ್ರಿಯಾಮಣಿ
Published On :
ಬೆಂಗಳೂರು: ದೀರ್ಘ ಕಾಲದ ಸ್ನೇಹಿತ ಮುಸ್ತಫಾ ರಾಜ್ ಜತೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ಪ್ರಿಯಾಮಣಿ ಬೆಂಗಳೂರಿನ ಜಯನಗರದ ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ.
ಮುಂಬೈನ ಗೆಳೆಯ ಮುಸ್ತಫಾ ರಾಜಾ ಜತೆ ಪ್ರಿಯಾಮಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಜಯನಗರ ಉಪನೋಂದಣಾಧಿಕಾರಿ ಕಚೇರಿಗೆ ತಂದೆ ವಾಸುದೇವ ಮಣಿ ಅಯ್ಯರ್ ಸೇರಿದಂತೆ ಕುಟುಂಬದವರ ಜತೆ ಆಗಮಿಸಿದರು. ಕಳೆದ ತಿಂಗಳು ಪ್ರಿಯಾಮಣಿ ಅವರು ರಿಜಿಸ್ಟರ್ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದರು.
ರಿಜಿಸ್ಟರ್ ಮದುವೆಯಾದ ಪ್ರಿಯಾಮಣಿ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು. ಮುಸ್ತಫಾ ರಾಜ್ ಸಹ ತಮ್ಮ ಕುಟುಂಬಸ್ಥರ ಜತೆ ಬಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.