ಸಿನಿಮಾ ಸುದ್ದಿ

ಪ್ರೇಕ್ಷಕರ ಪ್ರೀತಿ ಬೆಂಬಲದಿಂದ ತೀವ್ರ ಸಂತಸಗೊಂಡಿದ್ದೇನೆ: ರಮ್ಯ ಕೃಷ್ಣ

'ಬಾಹುಬಲಿ೨:ಅಂತ್ಯ' ಸಿನೆಮಾದಲ್ಲಿ ರಾಣಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯ ಕೃಷ್ಣ, ಸಿನೆಮಾದ ನಟನೆಗಾಗಿ ಪ್ರೇಕ್ಷಕರು ಪ್ರೀತಿ ಮತ್ತು ಬೆಂಬಲ ದೊಡ್ಡ ಮಟ್ಟದಲ್ಲಿ ತೋರುತ್ತಿರುವುದಕ್ಕೆ ತೀವ್ರ

ಪ್ರೇಕ್ಷಕರ ಪ್ರೀತಿ ಬೆಂಬಲದಿಂದ ತೀವ್ರ ಸಂತಸಗೊಂಡಿದ್ದೇನೆ: ರಮ್ಯ ಕೃಷ್ಣ
ರಮ್ಯ ಕೃಷ್ಣ
Published On :
ಚೆನ್ನೈ: 'ಬಾಹುಬಲಿ೨:ಅಂತ್ಯ' ಸಿನೆಮಾದಲ್ಲಿ ರಾಣಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯ ಕೃಷ್ಣ, ಸಿನೆಮಾದ ನಟನೆಗಾಗಿ ಪ್ರೇಕ್ಷಕರು ಪ್ರೀತಿ ಮತ್ತು ಬೆಂಬಲ ದೊಡ್ಡ ಮಟ್ಟದಲ್ಲಿ ತೋರುತ್ತಿರುವುದಕ್ಕೆ ತೀವ್ರ ಸಂತಸಗೊಂಡಿದುವುದಾಗಿ ಶನಿವಾರ ಹೇಳಿದ್ದಾರೆ. 
"ನಿಮೆಲ್ಲರನ್ನು ಪ್ರೀತಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಆದರ ಮತ್ತು ಬೆಂಬಲ ಇಲ್ಲವಾಗಿದ್ದರೆ ನನ್ನ ಈ ಸ್ಥಿತಿ ಸಾಧ್ಯವಾಗುತ್ತಿರಲಿಲ್ಲ. ನಾನು ತೀವ್ರ ಸಂತಸಗೊಂಡಿದ್ದೇನೆ" ಎಂದು ರಮ್ಯ ಟ್ವೀಟ್ ಮಾಡಿದ್ದಾರೆ. 
ಬಾಹುಬಲಿ ಸಿನೆಮಾದ ಎರಡು ಭಾಗಗಳಲ್ಲಿ ನಟಿಸಿರುವ ರಮ್ಯ ಅವರ ನಟನೆ ವಿಮರ್ಶಕರ ಮತ್ತು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಪಾತ್ರದ ಜನಪ್ರಿಯತೆ ಎಷ್ಟಿತ್ತೆಂದರೆ 'ದ ರೈಸ್ ಆಫ್ ಶಿವಗಾಮಿ' ಎಂಬ ಪುಸ್ತಕ ಕೂಡ ಬಿಡುಗಡೆಯಾಗಿತ್ತು. ರಮ್ಯ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ಮಾಪಕ ಶೋಬು ಯರ್ಲಗಡ್ಡ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.