'ದನ ಕಾಯೋನು' ಮೂಲಕ ಕನ್ನಡ ಚಿತ್ರರಂಗಕ್ಕೆ ನಟಾಶಾ ಸ್ಟ್ಯಾನ್ಕೋವಿಕ್
ಸೈಬೀರಿಯಾದ ಮಾಡೆಲ್-ನಟಿ ನಟಾಶಾ ಸ್ಟ್ಯಾನ್ಕೋವಿಕ್ ಅವರನ್ನು ನಿರ್ದೇಶಕ ಯೋಗರಾಜ್ ಭಟ್ 'ದನ ಕಾಯೋನು' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

Published On :
ಬೆಂಗಳೂರು: ಸೈಬೀರಿಯಾದ ಮಾಡೆಲ್-ನಟಿ ನಟಾಶಾ ಸ್ಟ್ಯಾನ್ಕೋವಿಕ್ ಅವರನ್ನು ನಿರ್ದೇಶಕ ಯೋಗರಾಜ್ ಭಟ್ 'ದನ ಕಾಯೋನು' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದಲ್ಲಿ ನಟಾಶಾ ಎರಡನೇ ನಾಯಕನಟಿ.
ನಟಾಶಾ ಬಾಲಿವುಡ್ ನಲ್ಲಿ ಈಗಾಗಲೇ 'ಸತ್ಯಾಗ್ರಹ', 'ದಿಶಕ್ಯೋಮ್ವ್' ಮುಂತಾದ ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದು, ಬಿಬ್ಗ್-ಬಾಸ್ 8 ನೇ ಆವೃತ್ತಿಯಿಯಲ್ಲಿ ಸ್ಪರ್ಧಾಳು ಕೂಡ.
"ನಟಾಶಾ ಕನ್ನಡ ಸಿನೆಮಾದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಸಂಶೋಧನಾ ವಿದ್ವಾಂಸೆಯ ಪಾತ್ರ ನಿರ್ವಹಿಸಿದ್ದಾರೆ" ಎಂದು ತಿಳಿಸುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.
ಹಾಗೆಯೇ ನಟಿ ದುನಿಯಾ ವಿಜಯ್ ಪಾತ್ರದ ಪರಿಚಯ ಹಾಡಿನಲ್ಲಿ ಕೂಡ ನಟಿ ಕಾಣಿಸಿಕೊಳ್ಳಲಿದ್ದಾರಂತೆ. "ನಟಿ ಅತಿ ಒಳ್ಳೆಯ ನೃತ್ಯಗಾರ್ತಿ. ನಾವು ಅವರ ನೃತ್ಯ ಕೌಶಲ್ಯವನ್ನು ತೋರಿಸಲು ಪ್ರಯತ್ನಿಸಿದ್ದೇವೆ" ಎಂದು ಕೂಡ ಅವರು ತಿಳಿಸುತ್ತಾರೆ.
ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸುಜ್ಞಾನ್ ಅವರ ಸಿನೆಮಾಟೋಗ್ರಫಿ ಇರುವ ಸಿನೆಮಾ ದಸರಾ ಹಬ್ಬದ ಸಮಯಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದುನಿಯಾ ವಿಜಯ್duniya vijayಯೋಗರಾಜ್ ಭಟ್Yogaraj Bhatದನ ಕಾಯೋನುDana KayonuNatasha Stankovicನಟಾಶಾ ಸ್ಟ್ಯಾನ್ಕೋವಿಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


