ಸಿನಿಮಾ ಸುದ್ದಿ

ನ್ಯೂ ಒರ್ಲಿಯನ್ಸ್ ನ ಮನೆಯನ್ನು ಮಾರಾಟ ಮಾಡಿದ ಆಂಜೆಲಿನಾ ಜೂಲಿ ಮತ್ತು ಬ್ರಾಡ್ ಪಿಟ್

ವಿಚ್ಛೇದನದ ಹಾದಿಯಲ್ಲಿರುವ ಹಾಲಿವುಡ್ ನ ಜನಪ್ರಿಯ ಜೋಡಿ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೂಲಿ...

ನ್ಯೂ ಒರ್ಲಿಯನ್ಸ್ ನ ಮನೆಯನ್ನು ಮಾರಾಟ ಮಾಡಿದ ಆಂಜೆಲಿನಾ ಜೂಲಿ ಮತ್ತು ಬ್ರಾಡ್ ಪಿಟ್
ಆಂಜೆಲಿನಾ ಜೂಲಿ-ಬ್ರಾಡ್ ಪಿಟ್
Published On :
ವಾಷಿಂಗ್ಟನ್: ವಿಚ್ಛೇದನದ ಹಾದಿಯಲ್ಲಿರುವ ಹಾಲಿವುಡ್ ನ ಜನಪ್ರಿಯ ಜೋಡಿ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೂಲಿ, ನ್ಯೂ ಒರ್ಲಿಯನ್ಸ್ ನಲ್ಲಿರುವ ತಮ್ಮ ಮನೆಯನ್ನು 4.9 ಮಿಲಿಯನ್ ಡಾಲರ್ ಬೆಲೆಗೆ ಮಾರಾಟ ಮಾಡಿದ್ದಾರೆ.
ಹಾಲಿವುಡ್ ವರದಿ ಪ್ರಕಾರ, 2007ರಲ್ಲಿ ಹುರ್ರಿಕೇನ್ ಕತ್ರಿನಾ ಚಂಡಮಾರುತದ ನಂತರ ಮೇಕ್ ಇಟ್ ರೈಟ್ ಫೌಂಡೇಶನ್ ಸ್ಥಾಪಿಸಿದ್ದರು. ಆ ಸಮಯದಲ್ಲಿ ಈ ಮನೆಯನ್ನು ಮೂರೂವರೆ ಮಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿದ್ದರು. ಮೂರು ಮಹಡಿಯ ಮನೆ 7 ಸಾವಿರದ 500 ಚದರಡಿ ವಿಸ್ತೀರ್ಣ ಹೊಂದಿದ್ದು 5 ಬೆಡ್ ರೂಂ, ಮೂರು ಸಂಪೂರ್ಣ ಬಾತ್ ರೂಂ, ಎರಡು ಹಾಫ್ ಬಾತ್ ರೂಂಗಳನ್ನು ಒಳಗೊಂಡಿದೆ.
ಹೊಂದಾಣಿಕೆ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯದ ಕಾರಣ ಹೇಳಿ ಕಳೆದ ಸೆಪ್ಟೆಂಬರ್ ನಲ್ಲಿ ಆಂಜೆಲಿನಾ ಜೂಲಿ ಬ್ರಾಡ್ ಪಿಟ್ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದರು. 11 ವರ್ಷಗಳಿಗೂ ಅಧಿಕ ಕಾಲ ಈ ಜೋಡಿ ಒಟ್ಟಿಗೆ ಇದ್ದರು.
ಬ್ರಾಂಜೆಲಿನಾ ಎಂದು ಜನಪ್ರಿಯವಾಗಿ ಅಭಿಮಾನಿಗಳಿಂದ ಕರೆಸಿಕೊಳ್ಳುವ ಈ ಜೋಡಿಗೆ 6 ಮಂದಿ ಮಕ್ಕಳಿದ್ದಾರೆ. ಪ್ರಸ್ತುತ ಎಲ್ಲಾ ಮಕ್ಕಳು ತಮ್ಮ ತಾಯಿ ಆಂಜೆಲಿನಾ ಜೊತೆ ತಾತ್ಕಾಲಿಕವಾಗಿ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.