ಸಿನಿಮಾ ಸುದ್ದಿ

ಐದು ದಶಕ, ೨೦೦ ಕ್ಕೂ ಹೆಚ್ಚು ಸಿನೆಮಾಗಳು; ಕೊನೆಗೂ ಆಸ್ಕರ್ ಪಡೆದ ಜಾಕಿ ಚಾನ್

೨೩ ವರ್ಷಗಳ ಹಿಂದೆ ಸಿಲ್ವೆಸ್ಟರ್ ಸ್ಟಲ್ಲೋನ್ ಹೌಸ್ ನಲ್ಲಿ ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಾಕಿ ಚಾನ್, ತಾವು ಕೂಡ ಅದನ್ನು ಪಡೆಯಬೇಕೆಂದು ನಿಶ್ಚಯಿಸಿದ್ದು ಆವಾಗಲೇ!

ಐದು ದಶಕ, ೨೦೦ ಕ್ಕೂ ಹೆಚ್ಚು ಸಿನೆಮಾಗಳು; ಕೊನೆಗೂ ಆಸ್ಕರ್ ಪಡೆದ ಜಾಕಿ ಚಾನ್
ಜೀವಮಾನ ಸಾಧನೆಗಾಗಿ ಗೌರವ ಆಸ್ಕರ್ ಪಡೆದ ನಟ ಜಾಕಿ ಚಾನ್
Published On :
ಲಾಸೆಂಜಲಿಸ್: ೨೩ ವರ್ಷಗಳ ಹಿಂದೆ ಸಿಲ್ವೆಸ್ಟರ್ ಸ್ಟಲ್ಲೋನ್ ಹೌಸ್ ನಲ್ಲಿ ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಾಕಿ ಚಾನ್, ತಾವು ಕೂಡ ಅದನ್ನು ಪಡೆಯಬೇಕೆಂದು ನಿಶ್ಚಯಿಸಿದ್ದು ಆವಾಗಲೇ!
ಶನಿವಾರ ನಡೆದ ವಾರ್ಷಿಕ ಗವರ್ನರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚೈನಾದ ನಟ ಮತ್ತು ಮಾರ್ಷಿಯಲ್ ಕಲಾವಿದ ಜಾಕಿ ಚಾನ್ ಅವರಿಗೆ ಕೊನೆಗೂ ಅವರ ದಶಕಗಳ ಸಿನೆಮಾ ಕೆಲಸವನ್ನು ಗುರುತಿಸಿ, ಗೌರವ ಆಸ್ಕರ್ ಪ್ರಶಸ್ತಿ ನೀಡಲಾಗಿದೆ. 
"ಸಿನೆಮಾ ರಂಗದಲ್ಲಿ ೫೬ ವರ್ಷಗಳನ್ನು ಕಳೆದು, ೨೦೦ ಕ್ಕೂ ಹೆಚ್ಚು ಸಿನೆಮಾಗಳನ್ನು ಮಾಡಿದ ಮೇಲೆ ಕೊನೆಗೂ "ಎಂದು ೬೨ ವರ್ಷದ ಚಾನ್ ಚಿನ್ನದ ಪ್ರತಿಮೆಯ ಪ್ರಶಸ್ತಿ ಹಿಡಿದು ಹೇಳಿದ್ದಾರೆ. 
ತಮ್ಮ ಮೂಲ ಸ್ಥಳ ಹಾಂಕಾಂಗ್ ಬಗ್ಗೆಯೂ ಪ್ರಶಂಸೆಯನ್ನು ಹರಿಸಿರುವ ಅವರು "ತಾವು ಹೆಮ್ಮೆಯ ಚೈನೀಸ್" ಎಂದು ಹೇಳಿಕೊಂಡಿದ್ದು ತಾವು ಇನ್ನು ಈ ರಂಗದಲ್ಲಿ ಉಳಿದಿರುವುದಕ್ಕೆ ಅಭಿಮಾನಿಗಳೇ ಕಾರಣ "ಮತ್ತು ನಾನು ಸಿನೆಮಾಗಳ್ಲಲಿ ನಟಿಸುವುದನ್ನು ಮುಂದುವರೆಸುತ್ತೇನೆ, ಕಿಟಕಿಗಳಿಂದ ನೆಗೆಯುವುದು, ಒದೆಯುವುದು, ಪಂಚ್ ಮಾಡುವುದು, ಮೂಳೆ ಮುರಿಯುವುದು ಮುಂದುವರೆಯುತ್ತದೆ" ಎಂದು ನಟ ಹೇಳಿದ್ದಾರೆ. 
ವಾರ್ಷಿಕ ಸಮಾರಂಭ ಏರ್ಪಡಿಸುವ ದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಇದೆ ಸಮಯದಲ್ಲಿ ಬ್ರಿಟಿಷ್ ಸಿನೆಮಾ ಸಂಕಲನಕಾರ ಆನ್ ವಿ ಕೋಟ್ಸ್, ಕ್ಯಾಸ್ಟಿಂಗ್ ನಿರ್ದೇಶಕ ಲಿನ್ ಸ್ಟಾಲ್ ಮಾಸ್ಟರ್ ಮತ್ತು ಸಾಕ್ಷಚಿತ್ರ ನಿರ್ದೇಶಕ ಫೆಡ್ರಿಕ್ ವೈಸ್ ಮ್ಯಾನ್ ಅವರಿಗೂ ಗೌರವ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.