ಕಿರುತೆರೆ ನಟಿ ಮನೆ ಮೇಲೆ ದಾಂಧಲೆ: ಮೃತ ನಟ ಹರೀಶ್ ಸಹೋದರನ ಕೃತ್ಯ
ಕಿರುತೆರೆ ನಟಿ ಮೇಘನಾ ಅವರ ಮನೆಗೆ ನುಗ್ಗಿ ನಾಲ್ವರು ವ್ಯಕ್ತಿಗಳು ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆ ನಡೆಸಿದವರ ಪೈಕಿ ಒಬ್ಬಾತ ...

ಬೆಂಗಳೂರು: ಕಿರುತೆರೆ ನಟಿ ಮೇಘನಾ ಅವರ ಮನೆಗೆ ನುಗ್ಗಿ ನಾಲ್ವರು ವ್ಯಕ್ತಿಗಳು ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆ ನಡೆಸಿದವರ ಪೈಕಿ ಒಬ್ಬಾತ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ನಟ ಹರೀಶ್ ಅವರ ಸಹೋದರನೆನ್ನಲಾಗಿದೆ.
ನಟಿ ಮೇಘನಾಗೆ ಕೊಲೆ ಬೆದರಿಕೆ ಹಾಕಿದ ಎನ್ನಲಾಗಿದೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ಅರಗಿಣಿ ಧಾರಾವಾಹಿಯ ನಟಿ ಮೇಘನಾ ಹಾಗೂ ಮೃತ ಹರೀಶ್ ನಡುವೆ ಈ ಹಿಂದೆ ಲಿವಿಂಗ್'ಟುಗೆದರ್ ಸಂಬಂಧವಿತ್ತು.
ಶೀಘ್ರವೇ ಅವರಿಬ್ಬರೂ ಮದುವೆಯೂ ಆಗಲಿದ್ದಾರೆಂಬ ಸುದ್ದಿಯೂ ಇತ್ತು. ಕಿರುತೆರೆ ನಟನಾಗಿದ್ದ ಹರೀಶ್ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ಇದೀಗ, ತನ್ನ ಸಹಚರರೊಂದಿಗೆ ಮೇಘನಾ ಮನೆಗೆ ನುಗ್ಗಿದ ಹರೀಶ್'ರ ಸಹೋದರನು, ಮನೆಯಲ್ಲಿರುವ ವಸ್ತುಗಳೆಲ್ಲಾ ಅಣ್ಣ ಹರೀಶನಿಗೆ ಸೇರಿದ್ದವು ಎಂದು ಹೇಳಿ ಮನೆಯಲ್ಲಿದ್ದ ವಸ್ತುಗಳೆಲ್ಲವನ್ನೂ ಹೊತ್ತೊಯ್ದಿದ್ದಾನೆ ಎಂದು ದೂರು ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


