ಸಿನಿಮಾ ಸುದ್ದಿ

ಮತ್ತೆ ಗಂಡು ಮಗುವಿಗೆ ಜನ್ಮ ನೀಡಿದ ಜೆನಿಲಿಯಾ: ಸಂತಸದಲ್ಲಿ ರಿತೇಶ್ ಕುಟುಂಬ

ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಅವರ ಪತ್ನಿ ನಟಿ ಜೆನಿಲಿಯಾ ಅವರು ಮತ್ತೆ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ...

ಮತ್ತೆ ಗಂಡು ಮಗುವಿಗೆ ಜನ್ಮ ನೀಡಿದ ಜೆನಿಲಿಯಾ: ಸಂತಸದಲ್ಲಿ ರಿತೇಶ್ ಕುಟುಂಬ
ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಹಾಗೂ ನಟಿ ಜೆನಿಲಿಯಾ
Published On :

ಮುಂಬೈ: ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಅವರ ಪತ್ನಿ ನಟಿ ಜೆನಿಲಿಯಾ ಅವರು ಮತ್ತೆ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ.

ರಿತೇಶ್ ಹಾಗೂ ಜೆನಿಲಿಯಾ ಬಾಲಿವುಡ್ ನ ಮುದ್ದಾದ ಜೋಡಿಗಳಲ್ಲಿ ಒಬ್ಬರಾಗಿದ್ದು, ಎಂಟು ವರ್ಷಗಳ ಪ್ರೀತಿಯ ಬಳಿಕ 2013 ರಲ್ಲಿ ಇಬ್ಬರು ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಈ ಜೋಡಿಯ ಮೊದಲ ಮಗು ರಿಯಾನ್ ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಮೊದಲ ಮಗುವಿನ ಹುಟ್ಟುಹಬ್ಬವನ್ನು ದಂಪತಿ ಅದ್ದೂರಿಯಾಗಿ ಆಚರಿಸಿದ್ದರು.

ರಿಯಾನ್ ಹುಟ್ಟುಹಬ್ಬ ಆಚರಿಸಿದ ಸಂತಸದ ಬೆನ್ನಲ್ಲೇ ರಿತೇಶ್ ಕುಟುಂಬಕ್ಕೆ ಇದೀಗ ಮತ್ತೊಂದು ಸಂತಸ ಲಭಿಸಿದೆ. ಇದರಂತೆ ಎರಡನೇ ಮಗುವಿನ ಸಂಸತವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಜೆನಿಲಿಯಾ ಅವರು, ಅರ್ಹತೆಗಿಂತಲೂ ಹೆಚ್ಚಾಗಿ ಆಶೀರ್ವದಿಸಿದ್ದಕ್ಕೆ ದೇವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇನ್ನು ತಮ್ಮ ಮಗ ರಿಯಾನ್ ಪರವಾಗಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಿತೇಶ್, ನನ್ನ ಅಜ್ಜಿ ಮತ್ತು ತಾತ ಚಿಕ್ಕ ಸಹೋದರನನ್ನು ನೀಡಿದ್ದು, ಇನ್ನು ಮುಂದೆ ನನ್ನ ಆಟಿಕೆ ವಸ್ತುಗಳೆಲ್ಲವೂ ಅವನಿಗೆ ಎಂದು ಹೇಳಿದ್ದಾರೆ.

ರಿತೇಶ್ ಎರಡನೇ ಮಗು ಆಗಮನಕ್ಕೆ ಇಡೀ ಬಾಲಿವುಡ್ ಸಂತಸವನ್ನು ವ್ಯಕ್ತಪಡಿಸಿದ್ದು, ದಂಪತಿಗಳಿಗೆ ಟ್ವಿಟರ್ ನಲ್ಲಿ ಶುಭ ಹಾರೈಕೆಯ ಸಂದೇಶಗಳನ್ನು ಕೋರುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.