'ದ ಗಾಡ್ ಫಾದರ್ ಟಿಪ್ಪಣಿ ಪುಸ್ತಕ' ಪ್ರಕಟಿಸಲಿರುವ ಫ್ರಾನ್ಸಿಸ್ ಫೋರ್ಡ್ ಕಪ್ಪೋಲಾ
ಹಾಲಿವುಡ್ ನ ಖ್ಯಾತ ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕಪ್ಪೋಲಾ 'ದ ಗಾಡ್ ಫಾದರ್ ನೋಟ್ ಬುಕ್'ವನ್ನು ಪ್ರಕಟಿಸಲಿದ್ದಾರೆ. ಆಸ್ಕರ್ ವಿಜೇತ ೧೯೭೨ರ 'ದ ಗಾಡ್ ಫಾದರ್' ಚಲನಚಿತ್ರ ನಿರ್ದೇಶಿಸುವ ವೇಳೆ,

ಲಾಸೇಂಜಲಿಸ್: ಹಾಲಿವುಡ್ ನ ಖ್ಯಾತ ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕಪ್ಪೋಲಾ 'ದ ಗಾಡ್ ಫಾದರ್ ನೋಟ್ ಬುಕ್'ವನ್ನು ಪ್ರಕಟಿಸಲಿದ್ದಾರೆ. ಆಸ್ಕರ್ ವಿಜೇತ ೧೯೭೨ರ 'ದ ಗಾಡ್ ಫಾದರ್' ಚಲನಚಿತ್ರ ನಿರ್ದೇಶಿಸುವ ವೇಳೆ, ತಾವು ಹಾಕಿಕೊಂಡಿದ್ದ ಯೋಜನೆಗಳು, ಬರೆದುಕೊಂಡಿದ್ದ ಟಿಪ್ಪಣಿಗಳ ಪುಸ್ತಕ ಇದು.
ಸಿನೆಮಾದ ಬಗ್ಗೆ ಅವರ ಚಿಂತನೆ, ನಿರ್ಮಾಣ ಹಂತದಲ್ಲಿ ಅವರ ಕೈಬರಹದ ಟಿಪ್ಪಣಿಗಳನ್ನುಳ್ಳ ಈ ಪುಸ್ತಕ ೨೦ ನೆ ಶತಮಾನದ ಅತ್ಯದ್ಭುತ ನಿರ್ದೇಶಕರಲ್ಲಿ ಒಬ್ಬರಾದ ಕಪ್ಪೋಲಾ ಅವರ ಸೃಜನಶೀಲತೆಯ ಕ್ರಮವನ್ನು ಬಿಚ್ಚಿಡಲಿದೆ ಎನ್ನುತ್ತದೆ ಹಾಲಿವುಡ್ ರಿಪೋರ್ಟರ್. ಕಾಂ ವರದಿ.
"'ದ ಗಾಡ್ ಫಾದರ್' ಸಿನೆಮಾ ನಿರ್ದೇಶಿಸುವ ವೇಳೆ ನಾನು ವ್ಯಯಕ್ತಿಕವಾಗಿ ಮಾಡಿಕೊಂಡಿದ್ದ ಟಿಪ್ಪಣಿಗಳ ಪುಸ್ತಕ ಇದು. ಹಲವು ವರ್ಷಗಳ ನಂತರ ಇದನ್ನು ಆಸಕ್ತರೊಡನೆ ಹಂಚಿಕೊಳ್ಳಲು ಉತ್ಸಾಹ ಮೂಡಿದೆ. ಮಾರಿಯೋ ಪೂಜೋ ಅವರ ಕಾದಂಬರಿಯನ್ನು ಸಿನೆಮಾಗೆ ಅಳವಡಿಸುವಾಗ ನನ್ನ ತಲೆಯಲ್ಲೇನಿತ್ತು ಎಂದು ಅರ್ಥ ಮಾಡಿಕೊಳ್ಳಲು ಇದು ಸಹಕರಿಸಲಿದೆ" ಎಂದು ಕಪ್ಪೋಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ದಿ ಗಾಡ್ ಫಾದರ್' ಚಿತ್ರೀಕರಣದ ಸಂದರ್ಭದ, ಹಿಂದೆಂದೂ ಕಂಡಿರದ ಸ್ಟಿಲ್ ಗಳು ಈ ಪುಸ್ತಕದಲ್ಲಿ ಲಭ್ಯವಾಗಲಿವೆ ಮತ್ತು ಈ ಪುಸ್ತಕಕ್ಕಾಗಿ ಈ ಜನಪ್ರಿಯ ನಿರ್ದೇಶಕ ಸುದೀರ್ಘ ಪ್ರಸ್ತಾವನೆಯನ್ನು ಕೂಡ ಬರೆದಿದ್ದಾರಂತೆ.
ರೇಗನ್ ಆರ್ಟ್ಸ್ ಪ್ರಕಟಿಸಿರುವ ಈ ಪುಸ್ತಕ ನವೆಂಬರ್ ೧೫ ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


