'ಸಾಹೇಬನ'ದೇ ಜಪತಪ: ಶಾನ್ವಿ ಶ್ರೀವಾಸ್ತವ್
ತಮ್ಮ ಮುಂದಿನ ಚಿತ್ರ 'ಸಾಹೇಬ'ದ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಇಟಲಿಗೆ ತೆರಳಲಿರುವ ನಟಿ ಶಾನ್ವಿ ಶ್ರೀವಾಸ್ತವ್ "ನಾನು 'ಸಾಹೇಬ'ನ ಬಗ್ಗೆ ಎಲ್ಲ ಕಡೆ ಸ್ತುತಿಸುತ್ತಿದ್ದೇನೆ" ಎಂದು ಒಪ್ಪಿಕೊಳ್ಳುವ ಅವರು

ಬೆಂಗಳೂರು: ತಮ್ಮ ಮುಂದಿನ ಚಿತ್ರ 'ಸಾಹೇಬ'ದ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಇಟಲಿಗೆ ತೆರಳಲಿರುವ ನಟಿ ಶಾನ್ವಿ ಶ್ರೀವಾಸ್ತವ್ "ನಾನು 'ಸಾಹೇಬ'ನ ಬಗ್ಗೆ ಎಲ್ಲ ಕಡೆ ಸ್ತುತಿಸುತ್ತಿದ್ದೇನೆ" ಎಂದು ಒಪ್ಪಿಕೊಳ್ಳುವ ಅವರು "ನಾನು 'ಸಾಹೇಬ'ನ ಪ್ರತಿ ಶಾಟ್ ನಿಂದ ಸಂತಸ ಪಡುತ್ತಿದ್ದೇನೆ ಏಕೆಂದರೆ ಸಿನೆಮಾದಲ್ಲಿ ಮಾನವ ಸಂಬಂಧಗಳ ಭಾವನೆಗಳಿವೆ ಮತ್ತು ಈ ಕಥೆ ನನಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ" ಎನ್ನುತ್ತಾರೆ.
ಸ್ಕ್ರಿಪ್ಟ್ ಕೂಡ ಓದದೆ ಶಾನ್ವಿ ಸಹಿ ಮಾಡಿದ ಮೊದಲ ಸಿನೆಮಾ ಇದಂತೆ. ಆದರೆ ಇದು ಅವರಿಗೆ ಕೆಲಸ ಮಾಡಿದೆ ಎನ್ನುವ ಅವರು "ನನ್ನ ಪಾತ್ರದ ಬಗ್ಗೆ ನಿರ್ದೇಶಕ ಭರತ್ ೧೦ ನಿಮಿಷ ಹೇಳಿದ ನಂತರ ತಕ್ಷಣ ಒಪ್ಪಿಕೊಂಡೆ. ಈ ನಿರ್ಧಾರ ಏಕೆ ತೆಗೆದುಕೊಂಡೆ ಎಂದು ಇನ್ನೂ ಗೊತ್ತಿಲ್ಲ. ಆದರೆ ಈಗ ಆ ನಿರ್ಧಾರದಿಂದ ಸಂತಸವಾಗುತ್ತಿದೆ. ಇದು ನನ್ನ ವೃತ್ತಿಜೀವನದಲ್ಲಿ ವಿಭಿನ್ನ ರೀತಿಯ ಸಿನೆಮಾ ಆಗಲಿದೆ" ಎಂದು ಅವರು ವಿವರಿಸುತ್ತಾರೆ.
ಇದು ಮಾಮೂಲಿ ಪ್ರೇಮ, ರೋಮ್ಯಾನ್ಸ್ ಚಿತ್ರಕಥೆಯಾಗಿಲ್ಲ ಎನ್ನುವ ಅವರು "ಯಾರೇ ನಾಯಕನಟನಿಗೆ ಹೀರೋಯಿಸಂ ಇಲ್ಲದಂಥ ಇಂತಹ ಸಿನೆಮಾವನ್ನು ಚೊಚ್ಚಲ ಸಿನೆಮಾವಾಗಿ ಒಪ್ಪಿಕೊಳ್ಳುವುದು ಕಷ್ಟ. ಇದು ಕಥಾ ಆಧಾರಿತ ಚಿತ್ರ. ಈಗಿನ ಟ್ರೆಂಡ್ ನೋಡಿದರೆ ಮನೋರಂಜನ್ ಕೂಡ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ "ಎನ್ನುತ್ತಾರೆ ಶಾನ್ವಿ.
ತಂದೆಗೆ ತಕ್ಕ ಮಗ
ಮನೋರಂಜನ್ ಅವರ ಹಾವ ಭಾವವನ್ನು ಅವರ ತಂದೆ ರವಿಚಂದ್ರನ್ ಅವರಿಗೆ ಹೋಲಿಸುವ ನಾಯಕಿ ಶಾನ್ವಿ "ಕುದುರೆ ಓಡಿಸುವುದಾಗಲೀ, ಅವರು ಭಾವನೆಗಳನ್ನು ವ್ಯಕ್ತಪಡಿಸುವುದಾಗಲೀ, ಬಹಳ ಶಕ್ತಿಯುತ ನಟನೆ ನೀಡುತ್ತಾರೆ ಮನೋರಂಜನ್" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


