ಸಿನೆಮಾಗಳಿಗೆ ಗುಡ್ ಬೈ ಹೇಳಿದ ರಾಧಿಕಾ?
ತಮ್ಮ ೧೬ ನೆ ವಯಸ್ಸಿನಲ್ಲಿ ತೆಲುಗು ಚಿತ್ರದ ರಿಮೇಕ್ 'ನಿನಗಾಗಿ' ಸಿನೆಮಾದಲ್ಲಿ ನಟಿಸಿದ ನಟಿಗೆ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುವ ಗುರಿ ಇತ್ತೋ ಇಲ್ಲವೋ,

ಬೆಂಗಳೂರು: ತಮ್ಮ ೧೬ ನೆ ವಯಸ್ಸಿನಲ್ಲಿ ತೆಲುಗು ಚಿತ್ರದ ರಿಮೇಕ್ 'ನಿನಗಾಗಿ' ಸಿನೆಮಾದಲ್ಲಿ ನಟಿಸಿದ ನಟಿಗೆ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುವ ಗುರಿ ಇತ್ತೋ ಇಲ್ಲವೋ, ಆದರೆ ಸಿನೆಮಾರಂಗದಲ್ಲಿ ಏರುಪೇರುಗಳನ್ನು ಕಂಡು, ಜನಪ್ರಿಯ ನಟಿಯಾಗಿದ್ದರೂ ರಾಧಿಕಾ ಕುಮಾರಸ್ವಾಮಿ ಈಗ ನಟನೆಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಅವರ ಸಹೋದರ ರವಿರಾಜ್ ಅವರ ಮಾತುಗಳನ್ನು ನಂಬುವುದಾದರೆ, ಒತ್ತಡಗಳಿಗೆ ಮಣಿದಿರುವ ರಾಧಿಕಾ ಸಿನೆಮಗಳಿಂದ ದೂರ ಉಳಿಯಲಿದ್ದಾರೆ.
ರಾಧಿಕಾ ಅವರು ಸದ್ಯಕ್ಕೆ ನಟಿಸುತ್ತಿರುವ 'ನಿಮಗಾಗಿ' ಸಿನೆಮಾದ ನಿರ್ದೇಶಕ ರಘುರಾಮ್ ಅವರ ಪ್ರಕಾರ ಇದು ನಟಿಯ ಕೊನೆಯ ಸಿನೆಮಾ ಆಗಲಿದೆಯಂತೆ.
"ಇತ್ತೀಚೆಗೆ ನಾವು ಮಂಗಳೂರಿನಲ್ಲಿ 'ನಿಮಗಾಗಿ' ಚಿತ್ರದ ಚಿತ್ರೀಕರಣ ನಡೆಸುತ್ತಿದ್ದೇವೆ ಎಂಬ ವರದಿಗಳಿದ್ದವು. ಆದರೆ ಅದು ಸತ್ಯಕ್ಕೆ ದೂರ. ನಾನು ಚಿತ್ರೀಕರಣ ನಿಲ್ಲಿಸಿ ಈ ಏಪ್ರಿಲ್ ಗೆ ಒಂದು ವರ್ಷ" ಎನ್ನುತ್ತಾರೆ ನಿರ್ದೇಶಕ.
"ರಾಧಿಕಾ ಅವರ ಸಿನೆಮಾ ಕೆಲಸಗಳನ್ನು ನೋಡಿಕೊಳ್ಳುವ ಅವರ ಸಹೋದರ ನನ್ನ ಜೊತೆಗೆ ಸಂಪರ್ಕದಲ್ಲಿದ್ದು, ಈ ಸಿನೆಮಾ ಪೂರ್ಣಗೊಳಿಸಲು ರಾಧಿಕಾ ಸಿದ್ಧರಿದ್ದಾರೆ ಆದರೆ ಒಂದು ತಿಂಗಳ ಮೊದಲೇ ತಿಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಇದು ಅವರ ಕೊನೆಯ ಸಿನೆಮಾ ಆಗಲಿದೆ ಎಂದು ಕೂಡ ತಿಳಿಸಿದ್ದಾರೆ" ಎಂದಿದ್ದಾರೆ ರಘುರಾಮ್.
'ನಿಮಗಾಗಿ' ಸಿನೆಮಾದ ಚಿತ್ರೀಕರಣ ೪೦% ಸಂಪೂರ್ಣಗೊಂಡಿದೆಯಂತೆ. ಆದರೆ ಇದನ್ನು ಧೃಢೀಕರಿಸಲು ನಟಿ ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


