ಸೂರಜ್ ಎರಡನೇ ಚಿತ್ರ 'ಪ್ರದೇಶ ಸಮಾಚಾರ'
'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ನಾಯಕನಾಗಿ ನಟಿಸಿದ್ದ ಸೂರಜ್ ಗೌಡ ಈಗ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಹಿಂದೆ ಹಲವಾರು ಸಿನೆಮಾಗಳಲ್ಲಿ ಸಹನಿರ್ದೇಶಕನಾಗಿ

ಬೆಂಗಳೂರು: 'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ನಾಯಕನಾಗಿ ನಟಿಸಿದ್ದ ಸೂರಜ್ ಗೌಡ ಈಗ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಹಿಂದೆ ಹಲವಾರು ಸಿನೆಮಾಗಳಲ್ಲಿ ಸಹನಿರ್ದೇಶಕನಾಗಿ ದುಡಿದಿರುವ ಅರ್ಜುನ್ 'ಪ್ರದೇಶ ಸಮಾಚಾರ'ದ ಮೂಲಕ ಚೊಚ್ಚಲ ಸಿನೆಮಾದ ನಿರ್ದೇಶಕರಾಗಲಿದ್ದಾರೆ.
"ಪ್ರೇಕ್ಷಕರ ಮನಸ್ಸಿನಿಂದ ಹೆಚ್ಚು ದಿನ ದೂರ ಉಳಿಯಲು ನನಗೆ ಇಷ್ಟವಿಲ್ಲ. ನನ್ನ ಚೊಚ್ಚಲ ಸಿನೆಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆಯಿತು. ಆದುದರಿಂದ ಹೊಸ ಯೋಜನೆ ಕೈಗೆತ್ತಿಕೊಂಡಿದ್ದೇನೆ. ನನ್ನ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಲವಾರು ನಟರು ಇನ್ನೂ ಎರಡನೆ ಸಿನೆಮಾಗೆ ಸಹಿ ಮಾಡಬೇಕಿದೆ. ಅದೃಷ್ಟವಶಾತ್ ನನಗೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದೆ" ಎನ್ನುತ್ತಾರೆ.
ರೋಮ್ಯಾಂಟಿಕ್ ಹಾಸ್ಯ ಚಿತ್ರವಾದ 'ಮದುವೆಯ ಮಮತೆಯ ಕರೆಯೋಲೆ' ಜನವರಿಯಲ್ಲಿ ಬಿಡುಗಡೆಯಾಗಿ ಸಾಧಾರಣ ಯಶಸ್ಸು ಕಂಡಿತ್ತು. ಈಗ ಚಾಕೊಲೆಟ್ ಹುಡುಗನ ಇಮೇಜ್ ಬದಲಿಸಿಕೊಳ್ಳಲು ಸಿಕ್ಸ್ ಪ್ಯಾಕ್ ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರಂತೆ ಸೂರಜ್.
ಪೂರ್ಣ ಮೀಡಿಯಾ ಹೌಸ್ ನಿರ್ಮಿಸುತ್ತಿರುವ 'ಪ್ರದೇಶ ಸಮಾಚಾರ' ಕೂಡ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಇದಕ್ಕೆ ಥ್ರಿಲ್ಲರ್ ತಿರುವು ಇರುತ್ತದಂತೆ. "ಸ್ವಾತಂತ್ರ್ಯ ದಿನದ ಒಂದು ರಾತ್ರಿ ನಡೆಯುವ ಕಥೆ ಇದು" ಎನ್ನುತ್ತಾರೆ ಸೂರಜ್.
"ಸ್ಕ್ರಿಪ್ಟ್ ಅದ್ಭುತವಾಗಿ ಮುಡಿ ಬಂದಿದೆ. ಪ್ರೇಕ್ಷಕರನ್ನು ಸ್ವಾತಂತ್ರ್ಯ ಸಿಕ್ಕ ೧೯೪೭ರ ಸಮಯಕ್ಕೆ ಕರೆದೊಯ್ಯಲಿದೆ" ಎಂದು ವಿವರಿಸುತ್ತಾರೆ ಸುರಕ್.
ಒಂದು ವಿಶೇಷ ಪಾತ್ರದಲ್ಲೂ ಕಾಣಿಸಿಕೊಳ್ಳಲಿರುವ ಗಾಯಕ ರಘು ದೀಕ್ಷಿತ್ ಈ ಸಿನೆಮಾದ ಸಂಗೀತ ನಿರ್ದೇಶಕ. ರಘು ದೀಕ್ಷಿತ್ ಸಂಗೀತ ನಿರ್ದೇಶಕನಾಗಿ ದುಡಿದಿದ್ದ ಕೊನೆಯ ಸಿನೆಮಾ ೨೦೧೧ರ 'ಕೋಟೆ'. 'ಆರ್ ಎಕ್ಸ್ ಸೂರಿ' ಸಿನೆಮಾದ ನಾಯಕ ನಟಿ ಆಕಾಂಕ್ಷಾ ಮಾತು ರವಿಶಂಕರ್ ತಾರಾಗಣದಲ್ಲಿದ್ದಾರೆ.
ಮಾರ್ಚ್ ೨೩ ರಿಂದ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


