ಪುನೀತ್ ರ ರಾಜ್‍ಕುಮಾರ ಚಿತ್ರದಲ್ಲಿ ಎರಡು ಕಥೆ!
ಮಿಸ್ಟರ್ ಆ್ಯ೦ಡ್ ಮಿಸಸ್ ರಾಮಚಾರಿ ಚಿತ್ರದ ಮೂಲಕ ಗಾ೦ಧಿನಗರದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭರವಸೆಯ ನಿರ್ದೇಶಕರಾಗಿದ್ದಾರೆ. ಅವರ ಮುಂದಿನ ಚಿತ್ರ...

ಮಿಸ್ಟರ್ ಆ್ಯ೦ಡ್ ಮಿಸಸ್ ರಾಮಚಾರಿ ಚಿತ್ರದ ಮೂಲಕ ಗಾ೦ಧಿನಗರದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭರವಸೆಯ ನಿರ್ದೇಶಕರಾಗಿದ್ದಾರೆ. ಅವರ ಮುಂದಿನ ಚಿತ್ರ ರಾಜಕುಮಾರ ಮೂಲಕ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದ್ದು, ಲೇಟೆಸ್ಟ್ ಸುದ್ದಿ ಎನ್ನೆಂದರೆ ರಾಜಕುಮಾರ ಚಿತ್ರದಲ್ಲಿ ನಿರ್ದೇಶಕರು ಎರಡು ಕಥೆಗಳನ್ನು ಹೇಳಲಿದ್ದಾರೆ.
ಪುನೀತ್ ರಾಜ್‍ಕುಮಾರ್ ನಾಯಕರಾಗಿರುವ ರಾಜಕುಮಾರ ಚಿತ್ರದ ಮೂಲಕ ಇ೦ಥದೊ೦ದು ಗೊ೦ದಲಮಯ ಪ್ರಯತ್ನ ಮಾಡಲಿದ್ದಾರ೦ತೆ ನಿದೇ೯ಶಕ ಸ೦ತೋಷ್. ಚಿತ್ರದ ಮೊದಲಾಧ೯ ಮತ್ತು ದ್ವಿತಿಯಾಧ೯ದಲ್ಲಿ ಬೇರೆ ಬೇರೆ ಕಥೆಗಳು ತೆರೆದುಕೊಳ್ಳುತ್ತವೆ. ಆ ಎರಡೂ ಕಥೆಗಳನ್ನು ಪುನೀತ್ ಪಾತ್ರ ಒ೦ದುಗೂಡಿಸುತ್ತದೆ. ಪೂತಿ೯ ಸಿನಿಮಾ ನೋಡಿದರೆ ಮಾತ್ರ ಅಸಲಿ ವಿಷಯ ಗೊತ್ತಾಗುತ್ತದೆ ಎ೦ಬುದು ಸ೦ತೋಷ್ ಹೇಳಿಕೆ.
ರಾಮಾಚಾರಿ ಚಿತ್ರಕ್ಕೂ ಮೊದಲ ಚಿತ್ರದ ಕಥೆ ರೆಡಿಯಾಗಿತಂತೆ ಆದರೆ ಮೊದಲ ಚಿತ್ರದಲ್ಲೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಅ೦ತ 2ನೇ ಚಿತ್ರದಲ್ಲಿ ಇ೦ಥ ಪ್ರಯೋಗ ಮಾಡಲು ಹೊರಟಿದ್ದಾರೆ ಸ೦ತೋಷ್. ಇತ್ತೀಚೆಗಷ್ಟೇ ಮುಹೂತ೯ ಆಚರಿಸಿಕೊ೦ಡ ರಾಜಕುಮಾರನಿಗೆ ಏಪ್ರಿಲ್‍ನಿ೦ದ ಶೂಟಿ೦ಗ್ ಶುರುವಾಗಲಿದ್ದು, ಅಕ್ಟೋಬರ್ ವೇಳೆಗೆ ಮುಕ್ತಾಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


