ನಾನು ಕೆಲಸ ಮಾಡಿದವರ ಪೈಕಿ ಶಾರುಖ್ ಉತ್ತಮ ಸಹನಟ: ಆಲಿಯಾ ಭಟ್
ಶಾರುಖ್ ಖಾನ್ ಅವರು ಉತ್ತಮ ಸಹನಟನಾಗಿದ್ದು, ಈ ಹಿಂದೆದೂ ಶಾರುಖ್ ರಂತಹ ನಟರೊಂದಿಗೆ ನಾನು ಕೆಲಸ ಮಾಡಿಲ್ಲ ಎಂದು ಬಾಲಿವುಡ್ ನ ಹಾಟ್ ಆ್ಯಂಡ್ ಸ್ಮಾರ್ಟ್ ನಟಿ ಆಲಿಯಾ...

ಮುಂಬೈ: ಶಾರುಖ್ ಖಾನ್ ಅವರು ಉತ್ತಮ ಸಹನಟನಾಗಿದ್ದು, ಈ ಹಿಂದೆದೂ ಶಾರುಖ್ ರಂತಹ ನಟರೊಂದಿಗೆ ನಾನು ಕೆಲಸ ಮಾಡಿಲ್ಲ ಎಂದು ಬಾಲಿವುಡ್ ನ ಹಾಟ್ ಆ್ಯಂಡ್ ಸ್ಮಾರ್ಟ್ ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.
ಗೌರಿ ಶಿಂಧೆ ನಿರ್ದೇಶನದ ಚಿತ್ರದ ಶೂಟಿಂಗ್ ಇಂದಿನಿಂದ ಆರಂಭವಾಗಿದ್ದು, ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ನಟಿಸುತ್ತಿದ್ದಾರೆ.
ಇದೀಗ ಶಾರುಖ್ ಖಾನ್ ಅವರೊಂದಿನ ನಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಲಿಯಾ, ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಶಾರುಖ್ ರೊಂದಿಗೆ ಉತ್ತಮ ಕ್ಷಣಗಳನ್ನು ಕಳೆದಿದ್ದೇನೆ. ಅವರ ಜೊತೆ ನಟಿಸುವಾಗ ಭಯವಾಗಲಿಲ್ಲ. ಅಭ್ಯಾಸದ ಸಮಯದಲ್ಲಿ ಸಂಭಾಷಣೆಯನ್ನು ಮರೆಯಲಿಲ್ಲ. ಶಾರುಖ್ ನಿಜಕ್ಕೂ ನಾನು ಈ ಹಿಂದೆಂದೂ ಕೆಲಸ ಮಾಡಿರದ ಉತ್ತಮ ಸಹನಟರಾಗಿದ್ದಾರೆಂದು ಹೇಳಿದ್ದಾರೆ.
ಶಾರುಖ್ ಒಬ್ಬ ಭಾವೋದ್ರಿಕ್ತ ಕೆಲಸಗಾರರಾಗಿದ್ದು, ನನಗೆ ನಾನು ಆಲಿಯಾ ಅವರು ಶಾರುಖ್ ಖಾನ್ ಎಂಬ ಭಾವನೆಗಳೇ ಬರಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


