ಮಹಿಳೆಯರ ಕುರಿತು ಅಶ್ಲೀಲ ಹೇಳಿಕೆ: ವಿವಾದದಲ್ಲಿ ನಟ ಬಾಲಕೃಷ್ಣ
ಮಹಿಳಾ ದಿನಾಚರಣೆಯ ಬೆನ್ನಲ್ಲೇ ನಟ ಹಾಗೂ ಆಂಧ್ರಪ್ರದೇಶ ಟಿಡಿಪಿ ಶಾಸಕ ಬಾಲಕೃಷ್ಣ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಹಿಳೆಯರ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದ ಬಾಲಕೃಷ್ಣ ವಿರುದ್ಧ ವಕೀಲ ರವಿಕುಮಾರ್ ಎಂಬುವವರು...

ಆಂಧ್ರಪ್ರದೇಶ: ಮಹಿಳಾ ದಿನಾಚರಣೆಯ ಬೆನ್ನಲ್ಲೇ ನಟ ಹಾಗೂ ಆಂಧ್ರಪ್ರದೇಶ ಟಿಡಿಪಿ ಶಾಸಕ ಬಾಲಕೃಷ್ಣ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಹಿಳೆಯರ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದ ಬಾಲಕೃಷ್ಣ ವಿರುದ್ಧ ವಕೀಲ ರವಿಕುಮಾರ್ ಎಂಬುವವರು ಹೈದ್ರಾಬಾದ್'ನ ಸರೂರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಸಾವಿತ್ರಿ ಸಿನಿಮಾ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಸಿದ್ದ ಬಾಲಕೃಷ್ಣ ಅವರು ತಮ್ಮ ಅಭಿಮಾನಿಗಳ ಕುರಿತು ಮಾತನಾಡಿದ್ದರು. ಈ ವೇಳೆ ನನ್ನ ಅಭಿಮಾನಿಗಳಿಗೆ ನಾನು ಚಿತ್ರ ನಾಯಕಿಯರ ಹಿಂದೆ ಹೋಗುವುದನ್ನು ಇಷ್ಟಪಡುವುದಿಲ್ಲ. ಒಂದು ನಾಯಕಿಯರಿಗೆ ಕಿಸ್ ಮಾಡಬೇಕು. ಇಲ್ಲವೇ, ಅವರನ್ನು ಗರ್ಭವತಿ ಮಾಡಬೇಕು ಎಂದು ಹೇಳಿದ್ದರು. ಬಾಲಕೃಷ್ಣ ಅವರ ಈ ಹೇಳಿಕೆ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಮಹಿಳೆಯರಿಗೆ ಮುಜುಗರವನ್ನುಂಟು ಮಾಡಿತ್ತು.
ಇದೀಗ ಬಾಲಕೃಷ್ಣ ಅವರ ಈ ಹೇಳಿಕೆ ಸಂಬಂಧ ಇಂದು ಪ್ರಕರಣ ದಾಖಲಾಗಿದ್ದು, ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿರುವುದರಿಂದ ದೂರು ಮಹತ್ವವನ್ನು ಪಡೆದುಕೊಂಡಿದೆ.
ಬಾಲಕೃಷ್ಣ ಹೇಳಿಕೆ ವಿರುದ್ಧ ಕಿಡಿಕಾರಿರುವ ನಟಿ ಹಾಗೂ ವೈಎಸ್ಆರ್ ಕಾಂಗ್ರೆಸ್ ನಾಯಕಿ ರೋಜಾ ಅವರು, ಹಿರಿಯ ನಾಯಕರಾಗಿ ಇಂತಹವರೇ ಮಹಿಳೆಯರಿಗೆ ಗೌರವ ನೀಡಿದ್ದರೆ, ಇಂದು ದೇಶದಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಲಕೃಷ್ಣ ಅವರು ಕೂಡಲೇ ತಮ್ಮ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತಂತೆ ಸ್ಪಷ್ಟನೆ ನೀಡಿರುವ ಬಾಲಕೃಷ್ಣ ಅವರು, ಅಭಿಮಾನಿಗಳ ನಿರೀಕ್ಷೆ ಹಾಗೂ ಅವರ ಆಲೋಚನೆಗಳ ಕುರಿತಂತೆ ಅಷ್ಟೇ ಮಾತನಾಡಿದ್ದೆ. ಅಷ್ಟೇ ಹೊರತು ಮಹಿಳೆಯರನ್ನು ಅವಮಾನಿಸಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಪ್ರಾಥಮಿಕ ಮಾಹಿತಿಗಳ ವರದಿಯನ್ನು ಸಲ್ಲಿಸುವುದಕ್ಕೂ ಮೊದಲೂ ಕಾನೂನು ನಿಬಂಧನೆಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


