'ಚಕ್ರವರ್ತಿ'ಗಾಗಿ ಗಂಭೀರನಾದ ಸೃಜನ್
ನಟ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದರೆ ತಟ್ಟನೆ ನೆನಪಾಗುವದು ಹಾಸ್ಯ. ಆದರೆ ಅವರು ತಮ್ಮ ಗೆಳೆಯ ನಟ ದರ್ಶನ್ ಜೊತೆಗೆ ನಟಿಸುತ್ತಿರುವ

ಬೆಂಗಳೂರು: ನಟ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದರೆ ತಟ್ಟನೆ ನೆನಪಾಗುವದು ಹಾಸ್ಯ. ಆದರೆ ಅವರು ತಮ್ಮ ಗೆಳೆಯ ನಟ ದರ್ಶನ್ ಜೊತೆಗೆ ನಟಿಸುತ್ತಿರುವ ಮುಂದಿನ ಚಿತ್ರ 'ಚಕ್ರವರ್ತಿ'ಯಲ್ಲಿ ಗಂಭೀರ ಪಾತ್ರ ನಿರ್ವಹಿಸಲಿದ್ದಾರೆ.
ಚಿಂತನ್ ನಿರ್ದೇಶನದ ಈ ಚಿತ್ರದಲ್ಲಿ 'ಎದೆಗಾರಿಕೆ'ಯ ನಂತರ ಮತ್ತೆ ಅಂತಹುದೊಂದು ಪಾತ್ರ ನಿರ್ವಹಿಸಲಿದ್ದಾರೆ.
"ನನ್ನ ಆದ್ಯತೆ ಎಂದಿಗೂ ಜನರನ್ನು ನಗಿಸುವುದು. ಅದರ ಜೊತೆಗೂ ಗಂಭೀರವಾದ ಪಾತ್ರಗಳು ಕೂಡ ನನಗೆ ಹೆಸರು ತಂದುಕೊಟ್ಟಿವೆ. ಅದಕ್ಕೆ ಉದಾಹರಣೆ 'ಎದೆಗಾರಿಕೆ'. ಅಂತಹ ಪಾತ್ರಗಳು ನಟನಲ್ಲಿನ ಬಹುಮುಖ ಸಾಮರ್ಥ್ಯವನ್ನು ಹೊರತರುತ್ತವೆ" ಎನ್ನುತ್ತಾರೆ ಸೃಜನ್.
ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಟ ದರ್ಶನ್ ಮತ್ತು ನಟಿ ದೀಪಾ ಸನ್ನಿಧಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
"ನಾನು ಮತ್ತು ದರ್ಶನ್ ಒಟ್ಟಿಗೆ ನಟಿಸಿದ ಚಿತ್ರಗಳು ಗೆಲ್ಲಬೇಕೆಂಬ ಅಸೆ ನನಗೆ. ಅವರ ಜೊತೆಗೆ ಕೆಲವೇ ಸಿನೆಮಾಗಳಲ್ಲಿ ನಟಿಸಿದ್ದರು ಜಗ್ಗುದಾದಾದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಕೆಲಸ ಮಾಡಿದೆ" ಎನ್ನುವ ಅವರು 'ಚಕ್ರವರ್ತಿ'ಯಲ್ಲೂ ಇವರಿಬ್ಬರು ಗೆಳೆಯರಂತೆ.
ಭೂಗತ ಲೋಕದ ಕಥಾ ಹಂದರ ಹೊಂದಿರುವ 'ಚಕ್ರವರ್ತಿ'ಯಲ್ಲಿ ನಟ ದರ್ಶನ್ ಅವರ ಸಹೋದರ ದಿನಕರ್ ಖಳನಾಯಕನ ಪಾತ್ರ ನಿರ್ವಹಿಸಿದ್ದರೆ, ನಟ ಆದಿತ್ಯ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


