'ಬೆಂಗಳೂರು ಅಂಡರ್ ವರ್ಲ್ಡ್' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾಯಲ್
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಲವಾರು ಮಾಡೆಲ್ ಗಳಲ್ಲಿ ಇತ್ತೀಚಿನ ಸೇರ್ಪಡೆ ಪಾಯಲ್ ರಾಧಾಕೃಷ್ಣ.

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಲವಾರು ಮಾಡೆಲ್ ಗಳಲ್ಲಿ ಇತ್ತೀಚಿನ ಸೇರ್ಪಡೆ ಪಾಯಲ್ ರಾಧಾಕೃಷ್ಣ.
ಪಿ ಎನ್ ಸತ್ಯ ನಿರ್ದೇಶನದ, ಆದಿತ್ಯ ನಾಯಕನಟನಾಗಿ ನಟಿಸುತ್ತಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಸಿನೆಮಾದಲ್ಲಿ ೨೦೧೫ರ ಮಿಸ್ ಮೈಸೂರು ಪಾದಾರ್ಪಣೆ ಮಾಡಲಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನಟಿಸಲು ಆತ್ಮವಿಶ್ವಾಸ ತಂದುಕೊಟ್ಟಿದೆ ಎನ್ನುತ್ತಾರೆ ಪಾಯಲ್ "ಕ್ಯಾಮರಾ ಎದುರಿಸಲು ಸುಲಭ ಎನ್ನಿಸುತ್ತಿದೆ" ಎನ್ನುತ್ತಾರೆ.
ಗ್ಲ್ಯಾಮರ್ ಗೆ ಹೆಚ್ಚಿನ ಅವಕಾಶ ಇಲ್ಲದ ಭೂಗತ ಸಿನೆಮಾವನ್ನು ಆಯ್ಕೆ ಮಾಡಿಕೊಂಡಿರುವ ನಟಿ "ಹೆಚ್ಚಿನ ಆಕ್ಷನ್ ದೃಶ್ಯಗಳಿದ್ದರೂ, ಪ್ರೀತಿಯ ವಿಭಿನ್ನ ಟ್ರ್ಯಾಕ್ ಇದೆ. ಸಿನೆಮಾಗಳೆಂದರೆ ಗ್ಲ್ಯಾಮರ್ ಮಾತ್ರ ಅಲ್ಲ ಬದಲಾಗಿ ಇದರಲ್ಲಿ ಒಳ್ಳೆಯ ಪ್ರದರ್ಶನ ಮುಖ್ಯ. ನಾನು ಸಿನೆಮಾ ಕ್ಷೇತ್ರ ಆರಿಸಿಕೊಂಡಿದ್ದರೂ ಅವುಗಳ ವಿಷಯದ ಬಗ್ಗೆ ನನಗೆ ಸ್ಪಷ್ಟತೆಯಿದೆ" ಎನ್ನುತ್ತಾರೆ ಪಾಯಲ್.
ತನ್ನ ಕ್ಷೇತ್ರ ವಿನ್ಯಾಸದ ಬದಲಿಗೆ ಈಗಾಗಲೇ ಹೆಸರು ಪಡೆದಿರುವ ನಿರ್ದೇಶಕನ ಜೊತೆಗೆ ಸಿನೆಮಾದಲ್ಲಿ ಕೆಲಸ ಮಾಡಲು ನಿರ್ಧರಿಸಿರುವುದರ ಬಗ್ಗೆ ಮಾತನಾಡುವ ೧೯ ವರ್ಷದ ಯುವ ನಟಿ "ಅವರು ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟಿದ್ದೇ ದೊಡ್ಡ ಸಂಗತಿ ಈಗ ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕಷ್ಟೇ" ಎನ್ನುತ್ತಾರೆ.
ಬಾಲಿವುಡ್ ಗೆ ಹೋಗುವ ಕನಸು ಕಾಣುವ ನಟಿ "ನನ್ನ ಮುಂದಿನ ಸಿನೆಮಾ ಯಾವುದಿರಬಹುದೆಂದು ಹೇಳಲು ಈಗ ಕಷ್ಟ. ಪ್ರಾದೇಶಿಕ ಚಿತ್ರರಂಗ ನನ್ನನ್ನು ಹೇಗೆ ಒಪ್ಪಿಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಇಲ್ಲಿ ನಾನು ಚೆನ್ನಾಗಿ ಪ್ರದರ್ಶನ ನೀಡಿದರೆ ಇನ್ನೂ ಹೆಚ್ಚು ಕಷ್ಟ ಬೀಳುತ್ತೇನೆ" ಎನ್ನುತ್ತಾರೆ ಪಾಯಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


