ರಸ್ತೆ ಸರಿಮಾಡಲು ಬಿಬಿಎಂಪಿ ವಿಫಲ: ಯೂಟರ್ನ್ ತಂಡದಿಂದ ರಿಪೇರಿ
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ಒಂದು ಪವನ್ ಕುಮಾರ್ ನಿರ್ದೇಶನದ ಯೂ ಟರ್ನ್ ಚಿತ್ರ ಕೂಡ. ಸಂಚಾರಿ ನಿಯಮ ಉಲ್ಲಂಘನೆ ಬಗ್ಗೆ ...

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ಒಂದು ಪವನ್ ಕುಮಾರ್ ನಿರ್ದೇಶನದ ಯೂ ಟರ್ನ್ ಚಿತ್ರ ಕೂಡ. ಸಂಚಾರಿ ನಿಯಮ ಉಲ್ಲಂಘನೆ ಬಗ್ಗೆ ಚಿತ್ರಕಥೆ ಹೆಣೆಯಲಾಗಿದೆ.
ತಮ್ಮ ಚಿತ್ರದಲ್ಲಿ ತೋರಿಸರುವ ನಿಗಧಿತ ಟ್ರಾಫಿಕ್ ಜಂಕ್ಷನ್ ನಲ್ಲಿ ರಸ್ತೆ ರಿಪೇರಿ ಆಗಿರಲಿಲ್ಲ. ಈ ಸಂಬಂಧ ಬಿಬಿಎಂಪಿ ಗೆ ಎಷ್ಟೇ ಭಾರಿ ಮನವಿ ಮಾಡಿದ್ದರೂ ಕ್ಯಾರೆ ಎನ್ನಲಿಲ್ಲ. ಹೀಗಾಗಿ ಚಿತ್ರ ತಂಡ ತಾವೇ ಮುಂದೆ ನಿಂತು ರಿಪೇರಿ ಮಾಡಿದೆ.
ನಾವು ತೆರೆ ಮೇಲೆ ಮಾತ್ರ ಹೀರೋಗಳಲ್ಲ ನಿಜ ಜೀವನದಲ್ಲೂ ಹೀರೋಗಳೇ ಅನ್ನೋದನ್ನು ತೋರಿಸಿದ್ದಾರೆ. ಫ್ಲೈ ಓವರ್ ನಲ್ಲಿ ಸಂಚರಿಸುವ ಮಂದಿಗೆ ಯಾವುದೇ ತೊಂದರೆ ಆಗ್ಬಾರ್ದು ಅನ್ನೋ ಕಾರಣಕ್ಕೆ ರಸ್ತೆ ರಿಪೇರಿ ಮಾಡುತ್ತಿದ್ದರು. ಯೂ ಟರ್ನ್ ತಗೊಂಡು, ಅದ್ರಿಂದ ಆಕ್ಸಿಡೆಂಟ್ ಆಗಿ, ಜೀವ ಕಳ್ಕೊಂಡು ಯಾಕೆ ಇನ್ನೊಂದು ಸಿನಿಮಾಗೆ ಕಥೆಯಾಗ್ಬೇಕು ಅನ್ನೋ ಕಾರಣಕ್ಕೆ ರಸ್ತೆ ರಿಫೇರಿ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ ನಿರ್ದೇಶಕ ಪವನ್ ಕುಮಾರ್, ಶ್ರದ್ಧಾಶ್ರೀನಾಥ್ ದಿಲೀಪ್ ರಾಜ್, ರಾಧಿಕಾ ಚೇತನ್ ಸೇರಿದಂತೆ ಎಲ್ಲಾ ನಟರು ಭಾಗವಹಿಸಿ ಫ್ಲೈಓವರ್ ರಸ್ತೆ ಸರಿ ಪಡಿಸಿದರು. ಕಲಾವಿದ ಬಾದಲ್ ನಂಜುಂಡಸ್ವಾಮಿ ಬ್ಲಾಕ್ ಗಳಿಗೆ ಪೈಂಟ್ ಮಾಡಿದ್ದಾರೆ.
10 ಮಂದಿ ಕಾರ್ಮಿಕರು, ಸಿಮೆಂಟ್, ಕಾಂಕ್ರಿಟ್ ಹಾಕಿ ರಿಪೇರಿ ಮಾಡಲಾಗಿದೆ. ಇದಕ್ಕೆ ಸುಮಾರು 50 ಸಾವಿರ ರು ಹಣ ಖರ್ಚಾಗಿದೆ ಎಂದು ನಿರ್ದೇಶಕ ಪವನ್ ಕುಮಾರ್ ತಿಳಿಸಿದ್ದಾರೆ.
ಇನ್ನು ಮುಂದಾದರೂ ನಾವು ಬಿಬಿಎಂಪಿ ಅಥವಾ ಸರ್ಕಾರವನ್ನು ದೂರುವ ಬದಲು ನಾವೇ ಒಂದು ತಂಡ ಕಟ್ಟಿಕೊಂಡು ಅಗತ್ಯವಾದ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದು ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


