ನಟಿ, ಹಿರಿಯ ರಂಗ ಕಲಾವಿದೆ ಸುಲಭಾ ದೇಶಪಾಂಡೆ ನಿಧನ
ರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ (79) ಅವರು ..

ಮುಂಬೈ: ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ (79) ಅವರು ನಿಧನಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದರು.
1971ರಲ್ಲಿ ಆವಿಷ್ಕಾರ್ ನಟನಾ ತಂಡದೊಂದಿಗೆ ಮರಾಠಿ ಹಾಗೂ ಹಿಂದಿ ರಂಗಭೂಮಿಗೆ ಕಾಲಿಟ್ಟ ಅವರು, ಕ್ರಮೇಣ ಸಿನಿಮಾಗಳಲ್ಲೂ ಕಾಣಿಸಿಕೊಂಡರು
ಹಿರಿಯ ನಟ, ನಾಟಕಕಾರ ವಿಜಯ್ ತೆಂಡೂಲ್ಕರ್ ಅವರಂತಹ ಖ್ಯಾತರ ನಾಟಕಗಳಲ್ಲಿ ಅಭಿನಯಿಸಿರುವ ಸುಲಭಾ ದೇಶಪಾಂಡೆ, ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದರು. ಹಿಂದಿಯ ಖ್ಯಾತ ಚಿತ್ರಗಳಾದ ಭೂಮಿಕಾ(1977), ಅರವಿಂದ್ ದೇಸಾಯಿ ಕಿ ಅಜೀಬ್ ದಾಸ್ತಾನ್(1978), ಗಮನ್ (1978) ಮತ್ತು ಇತ್ತೀಚೆಗೆ ಬಿಡುಗಡೆಯಾದ ಗೌರಿ ಶಿಂಧೆ ಅವರ ಹಿಟ್ ಚಿತ್ರ ‘ಇಂಗೀಷ್ ವಿಂಗ್ಲಿಶ್’ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು.
ವಿಜಯ್ ಮೆಹ್ತಾ, ಸತ್ಯದೇವ್ ದುಬೆ ಜತೆಗೆ ಮರಾಠಿಯಲ್ಲಿ ರಂಗಾಯಣ ತಂಡದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಸುಲಭಾ, 1971 ರಲ್ಲಿ ‘ಆವಿಷ್ಕಾರ್’ ಎಂಬ ಹೆಸರಿನ ನಾಟಕ ತಂಡವನ್ನು ತಮ್ಮ ಪತಿ ಅರವಿಂದ್ ದೇಶಪಾಂಡೆ ಜತೆ ಪ್ರಾರಂಭಿಸಿದ್ದರು.
ಇವರ ಪತಿ ಅರವಿಂದ್ ದೇಶ್‌ಪಾಂಡೆ ಅವರೂ ಕೂಡ ರಂಗಭೂಮಿ ಕಲಾವಿದರಾಗಿದ್ದರು. 1987ರಲ್ಲಿ ಅವರು ನಿಧನಹೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


