ಸಿನಿಮಾ ಸುದ್ದಿ

ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸಲು ಅವಕಾಶ ಪಡೆದ ವಿದ್ಯಾ ಬಾಲನ್

ಪ್ರಾದೇಶಿಕ ಸಿನೆಮಾಗಳಲ್ಲಿ ನಟಿಸಲು ಮುಂದಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್ ಅವರಿಗೆ ಎರಡು ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸಲು ಅವಕಾಶ ಬಂದಿದೆಯಂತೆ.

ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸಲು ಅವಕಾಶ ಪಡೆದ ವಿದ್ಯಾ ಬಾಲನ್
ನಟಿ ವಿದ್ಯಾ ಬಾಲನ್
Published On :

ಮುಂಬೈ: ಪ್ರಾದೇಶಿಕ ಸಿನೆಮಾಗಳಲ್ಲಿ ನಟಿಸಲು ಮುಂದಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್ ಅವರಿಗೆ ಎರಡು ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸಲು ಅವಕಾಶ ಬಂದಿದೆಯಂತೆ.

ನಿಮಗೆ ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸುವ ಅವಕಾಶ ಬಂದಿದೆಯೇ ಎಂಬ ಪ್ರಶ್ನೆಗೆ "ಇತ್ತೀಚೆಗಷ್ಟೇ ಎರಡು ಅವಕಾಶ ಬಂದಿದೆ. ನಟಿಸುವುದು ಸ್ಕ್ರಿಪ್ಟ್ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನಿ ಸಿನೆಮಾ 'ಬೋಲ್' ನೋಡಿದ್ದೇನೆ ಮತ್ತು ಮೆಚ್ಚಿದ್ದೇನೆ. 'ಕಾಮೋಶ್ ಪಾನಿ' ಇನ್ನೂ ನೋಡಿಲ್ಲ ಆದರೆ ಒಳ್ಳೆಯ ಸಿನೆಮಾ ಎಂದು ಕೇಳಿದ್ದೇನೆ. ವಿಶ್ವದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ" ಎಂದು ಅವರು ವಿವರಿಸುತ್ತಾರೆ.

ಸ್ಕ್ರಿಪ್ಟ್ ಗಳನ್ನು ಓದಿದ್ದೀರಾ ಎಂಬ ಪ್ರಶ್ನೆಗೆ "ಅವರನ್ನು ಇನ್ನೂ ಭೇಟಿಯಾಗಿಲ್ಲ. ಇಬ್ಬರು ಕರೆ ಮಾಡಿ ಕಥೆ ಹೇಳಲು ಆಸಕ್ತಿ ತೋರಿದ್ದಾರೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.