ಸಿನಿಮಾ ಸುದ್ದಿ

ಜೂನ್ ೧೧ಕ್ಕೆ ರಜನಿಕಾಂತ್ 'ಕಬಾಲಿ' ಆಡಿಯೋ ಅದ್ದೂರಿ ಬಿಡುಗಡೆ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ-ಭೂಗತ ಡ್ರಾಮ 'ಕಬಾಲಿ' ಸಿನೆಮಾದ ಆಡಿಯೋ ಬಿಡುಗಡೆ ಅದ್ದೂರಿಯಾಗಿ ಜೂನ್ ೧೧ಕ್ಕೆ ನೆರವೇರಲಿದೆ ಎಂದು ಮೂಲಗಳು

ಜೂನ್ ೧೧ಕ್ಕೆ ರಜನಿಕಾಂತ್ 'ಕಬಾಲಿ' ಆಡಿಯೋ ಅದ್ದೂರಿ ಬಿಡುಗಡೆ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್
Published On :

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ-ಭೂಗತ ಡ್ರಾಮ 'ಕಬಾಲಿ' ಸಿನೆಮಾದ ಆಡಿಯೋ ಬಿಡುಗಡೆ ಅದ್ದೂರಿಯಾಗಿ ಜೂನ್ ೧೧ಕ್ಕೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

"ಆಡಿಯೋ ಬಿಡುಗಡೆಗೆ ಜೂನ್ ೧೧ನೆಯ ತಾರೀಕನ್ನು ಆಯ್ಕೆ ಮಾಡಲಾಗಿದೆ. ಅಂದಿಗೆ ರಜನಿಕಾಂತ್ ಅಮೆರಿಕಾದ ರಜಾ ವಿರಾಮ ಮುಗಿಸಿ ಬಂದಿರುತ್ತಾರೆ. ಈ ಮೊದಲು ಜೂನ್ ೯ಕ್ಕೆ ಹಮ್ಮಿಕೊಳ್ಳಲಾಗಿತ್ತು ಆದರೆ ವಾರಾಂತ್ಯಕ್ಕೆ ನಡೆಸಲು ನಿರ್ಮಾಪಕರು ಎರಡು ದಿನ ಮುಂದೂಡಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಚೆನ್ನೈ ನಗರದ ವೈ ಎಂ ಸಿ ಎ ಮೈದಾನದಲ್ಲಿ ಈ ಅದ್ದೂರಿ ಬಿಡುಗಡೆ ನಡೆಯಲಿದೆ.  ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ೩೨ ವರ್ಷದ ಹಾಗೂ ೬೦ ವರ್ಷದ ಭೂಗತ ದೊರೆಯಾಗಿ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಧಿಕಾ ಆಪ್ಟೆ, ದಿನೇಶ್, ಧಾನಿಶ್ಕ, ಕಿಶೋರ್, ಕಲೈಅರಸನ್ ಮುಂತಾದವರು ನಟಿಸಿರುವ ಸಿನೆಮಾ ಜುಲೈ ೧ ಕ್ಕೆ ಬಿಡುಗಡೆಯಾಗಿದೆ. ಸಂತೋಷ್ ನಾರಾಯಣನ್ ಸಿನೆಮಾಗೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.