ದಲಿತ ಚಿತ್ರ ನಿರ್ದೇಶಕ ಎಂದು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ: ಕಬಾಲಿ ನಿರ್ದೇಶಕ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ನಿರ್ದೇಶಕ ಪಿಎ ರಂಜಿತ್, ದಲಿತ ಚಿತ್ರ ನಿರ್ದೇಶಕ ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ನಿರ್ದೇಶಕ ಪಿಎ ರಂಜಿತ್, ದಲಿತ ಚಿತ್ರ ನಿರ್ದೇಶಕ ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.
ತಾವು ಸಹ ಜಾತಿ ಪದ್ಧತಿಯಿಂದ ನೊಂದಿರುವ ಕಾರಣ ತಮ್ಮ ಚಿತ್ರಗಳಲ್ಲಿ ಜಾತಿ ಪದ್ಧತಿಯ ಸಮಸ್ಯೆಗಳನ್ನು ತೋರಿಸುತ್ತೇನೆ ಎಂದು ಆದರೆ ನಾನು ದಲಿತ ಚಿತ್ರ ನಿರ್ದೇಶಕ ಎಂದು ಬ್ರಾಂಡ್ ಆಗುವುದಕ್ಕೆ ಇಚ್ಛಿಸುವುದಿಲ್ಲ ಎಂದು ಪಿಎ ರಂಜಿತ್ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನಾನು ದಲಿತ ಸಮುದಾಯಕ್ಕೆ ಸೇರಿದೆ ಇದಿದ್ದರೂ ಸಹ ಚಿತ್ರಗಳಲ್ಲಿ ಜಾತಿ ಪದ್ಧತಿಯ ಸಮಸ್ಯೆಗಳನ್ನು ತೋರಿಸುವುದನ್ನು ಮುಂದುವರೆಸುತ್ತಿದ್ದೆ ಎಂದು ರಂಜಿತ್ ತಿಳಿಸಿದ್ದಾರೆ.
ಕಬಾಲಿ ಚಿತ್ರದಲ್ಲಿ ರಜನಿಕಾಂತ್ ನಿರ್ವಹಿಸಿರುವ ಪಾತ್ರದ ವ್ಯಕ್ತಿ ತೆಲಂಗಾಣದ ದಲಿತರ ಸಮಸ್ಯೆಗಳನ್ನು ತೆರೆದಿಟ್ಟಿರುವ ಸತ್ಯನಾರಾಯಣ ಅವರ ಮೈ ಫಾದರ್ ಬಾಲಯ್ಯ ಎಂಬ ಪುಸ್ತಕವನ್ನು ಓದಿರುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ಸಮಾಜದ ಅಸಮಾನತೆ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


