ಕಬಾಲಿ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 65 ಕೋಟಿ?
ಜಗತ್ತೆ ನಿಬ್ಬೆರಗಾಗಿ ಕಾಯುತ್ತಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಚಿತ್ರ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿದ್ದು...

ಚೆನ್ನೈ: ಜಗತ್ತೆ ನಿಬ್ಬೆರಗಾಗಿ ಕಾಯುತ್ತಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಚಿತ್ರ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಮೊದಲ ದಿನವೇ 65 ಕೋಟಿ ಗಳಿಗೆ ಮಾಡಿದೆ ಎನ್ನಲಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿರುವ ಕಬಾಲಿ ಚಿತ್ರ ಭಾರತದಲ್ಲಿ 50 ಕೋಟಿ ಹಾಗೂ ವಿದೇಶದಲ್ಲಿ 15 ಕೋಟಿ ಗಳಿಗೆ ಮಾಡಿದೆ ಎನ್ನುತ್ತಿವೆ ಬಾಕ್ಸ್ ಆಫೀಸ್ ಮೂಲಗಳು.
ಅಮೆರಿಕ, ಬ್ರಿಟನ್, ಮಲೇಷ್ಯಾ, ಸಿಂಗಾಪುರ, ಜಪಾನ್ ಸೇರಿ ಜಗತ್ತಿನ ಹಲವು ಭಾಷೆಗಳಲ್ಲಿ ಸುಮಾರು 5000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ತೆರೆಕಂಡಿದೆ.
ಬಹುತೇಕ ಕಡೆ ಮೊದಲ ಮೂರು ದಿನ ಟಿಕೆಟ್ ಮಾರಾಟವಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದರು. ಇನ್ನು ತಮಿಳುನಾಡು ಒಂದರಲ್ಲೇ 1000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಹೊಸ ದಾಖಲೆ ಸೃಷ್ಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


