ಅಂತರ್ಜಾಲದಲ್ಲಿ ಸೋರಿಕೆಯಾಯಿತೇ ರಜನಿಕಾಂತ್ 'ಕಬಾಲಿ'?
ಜುಲೈ 22 ರಂದು ಬಿಡುಗಡೆಯಾಗಬೇಕಿರುವ ಬಹು ನಿರೀಕ್ಷಿತ ಚಲನಚಿತ್ರ ರಜನಿಕಾಂತ್ ಅಭಿನಯದ 'ಕಬಾಲಿ' ಅಂತರ್ಜಾಲದಲ್ಲಿ ಸೋರಿಕೆಯಾಗಿದೆ ಎನ್ನುತ್ತವೆ ವರದಿಗಳು.

Published On :
ಜುಲೈ 22 ರಂದು ಬಿಡುಗಡೆಯಾಗಬೇಕಿರುವ ಬಹು ನಿರೀಕ್ಷಿತ ಚಲನಚಿತ್ರ ರಜನಿಕಾಂತ್ ಅಭಿನಯದ 'ಕಬಾಲಿ' ಅಂತರ್ಜಾಲದಲ್ಲಿ ಸೋರಿಕೆಯಾಗಿದೆ ಎನ್ನುತ್ತವೆ ವರದಿಗಳು.
'ಡಾರ್ಕ್ ವೆಬ್' ನಲ್ಲಿ ಈ ಸಿನೆಮಾ ಡೌನ್ ಲೋಡ್ ಮಾಡಿಕೊಳ್ಳಲು ಹಲವಾರು ಕೊಂಡಿಗಳಿವೆ ಎಂದು ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ನಿರ್ಮಾಪಕ ಎಸ್ ಥಾನು, 169 ಅಂತರ್ಜಾಲ ತಾಣಗಳು ಸಿನೆಮಾ ನಕಲು ವ್ಯವಹಾರದಲ್ಲಿ ತೊಡಗಿಸಿಕೊಂಡು ಹಕ್ಕುಸ್ವಾಮ್ಯ ಉಲ್ಲಂಘಿಸಿರುವುದಾಗಿ ಮದ್ರಾಸ್ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದರ ಹೊರತಾಗಿಯೂ ಈ ಸೋರಿಕೆಯಾಗಿದೆ.
ಈ ತಾಣಗಳಲ್ಲಿ ಈ ಸಿನೆಮಾವನ್ನು ತೆಗೆದು ಹಾಕಲು ನಿರ್ಮಾಪಕರ ಆಪ್ತರು ಅಧಿಕಾರಿಗಳ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡ ಬಜೆಟ್ ಸಿನೆಮಾಗಳು ಅಂತರಾಜಲದಲ್ಲಿ ಸೋರಿಕೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ "ಅವರು ರಜನಿಕಾಂತ್ ಅವರನ್ನೂ ಬಿಟ್ಟಿಲ್ಲ. 'ಕಬಾಲಿ' ಚೆನ್ನೈ ನಲ್ಲಿ ಸೆನ್ಸಾರ್ ಆಗಿತ್ತು, ಆದುದರಿಂದ ನಮ್ಮ ಮುಂಬೈ ಕಚೇರಿ ವಿಷಯ ಬರುವುದೇ ಇಲ್ಲ. ಈ ಹಿಂದೆ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಗು ಹೀಗಾಗಿತ್ತು. ಆದರೆ ದೊಡ್ಡ ತಾರೆಯರ ಸಿನೆಮಾಗಳು ಸೋರಿಕೆಯಾಗುವುದರಿಂದ ಆ ಸಿನೆಮಾಗಳ ಗಳಿಕೆಗೇನು ತೊಂದರೆಯಾಗುವುದಿಲ್ಲ. ಆದರೆ ಸಣ್ಣ ಸಿನೆಮಾಗಳಿಗೆ ತೊಂದರೆಯಾಗುತ್ತದೆ" ಎಂದು ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್' ಮತ್ತು 'ಉಡ್ತಾ ಪಂಜಾಬ್' ಸಿನೆಮಾದ ಸೆನ್ಸಾರ್ ಮಂಡಳಿ ಪ್ರತಿ ಅಂತರ್ಜಾಲದಲ್ಲಿ ಸೋರಿಕೆಯಾಗಿದ್ದವು. ಕನ್ನಡದ 'ತಿಥಿ' ಸಿನೆಮಾ ಕೂಡ ಅಂತಜಾಲದಲ್ಲಿ ವ್ಯಾಪಕವಾಗಿ ಸಿಗುತ್ತಿತ್ತು.
ಈಮಧ್ಯೆ 'ಕಬಾಲಿ' ಸಿನೆಮಾದ ಏರ್ಲೈನ್ಸ್ ಜೋಡೀದಾರ ಏರ್ ಏಷಿಯಾ ಹೊಸ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. ಈ ಟೀಸರ್ ಇಲ್ಲಿ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


