ಸಾವಿನ ಕದ ತಟ್ಟಿ ಬದುಕಿದ ಬಂದ ನಟಿ ಆಂಚಲ್ ಖುರಾನಾ
ರಿಯಾಲಿಟಿ ಶೋ ರೋಡೀಸ್ ಸೀಸನ್ 8ರ ವಿಜೇತೆ ಹಾಗೂ ಕಿರುತೆರೆ ನಟಿ ಆಂಚಲ್ ಖುರಾನಾ ಅವರು ಸಾವಿನ ಕದತಟ್ಟಿ ಬದುಕಿ ಬಂದಿದ್ದಾರೆ...

ನವದೆಹಲಿ: ರಿಯಾಲಿಟಿ ಶೋ ರೋಡೀಸ್ ಸೀಸನ್ 8ರ ವಿಜೇತೆ ಹಾಗೂ ಕಿರುತೆರೆ ನಟಿ ಆಂಚಲ್ ಖುರಾನಾ ಅವರು ಸಾವಿನ ಕದತಟ್ಟಿ ಬದುಕಿ ಬಂದಿದ್ದಾರೆ.
ಕೆಲ ದಿನಗಳ ಹಿಂದೆ ನಟಿ ಆಂಚಲ್ ಖುರಾನಾ ಅವರಿಗೆ ಹೃದಯ ಸ್ತಂಭನ ಎದುರಾಗಿದೆ. ತಮಗೆ ಎದುರಾಗಿರುವ ಸಮಸ್ಯೆ ಬಗ್ಗೆ ಮಾಹಿತಿಯೇ ಇಲ್ಲದ ನಟಿ ವೈದ್ಯರು ತಿಳಿಸಿದ ಮಾಹಿತಿ ಕೇಳಿ ಗಾಬರಿಯಾಗಿದ್ದಾರೆ. ಹೃದಯ ಸ್ತಂಭನ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ಖಾಸಗಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದ್ದು, ನಟಿ ಆಂಚಲ್ ಖುರಾನಾ ಅವರು ತಮಗಾದ ಅನುಭವವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಎಲ್ಲವೂ ಇದ್ದಕ್ಕಿದ್ದಂತೆ ನಡೆದುಹೋಯಿತು. ನನಗಿರುವ ಸಮಸ್ಯೆ ಬಗ್ಗೆ ನನಗೆ ತಿಳಿದಿರಲಿಲ್ಲ. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ನನ್ನ ಹೃದಯ ಬಡಿಯುವುದನ್ನೇ ನಿಲ್ಲಿಸಿಬಿಟ್ಟಿತ್ತು. ಈ ವೇಳೆ ಕುಸಿದು ಬಿದ್ದೆ. ಕೂಡಲೇ ಕುಟುಂಬಸ್ಥರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ವೈದ್ಯರು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು. ಸಲಹೆ ನೀಡಿದ ಕೆಲವೇ ಕ್ಷಣಗಳಲ್ಲಿ ನನ್ನ ನಾರಿಮಿಡಿತ 180-190ಕ್ಕೆ ಬಂದಿತು. ದೇಹ ತಣ್ಣಗಾಗಲು ಆರಂಭಿಸಿತು. ಆ ಸಮಯದಲ್ಲಿ ಸಾವಿನ ಅಂಚಿಗೆ ತಲುಪಿದ್ದೇನೆಂಬ ಅನುಭವವಾಗಿತ್ತು.
ಕೆಲ ನಿಮಿಷಗಳ ನಂತರ ವಾಂತಿಯಾಗಲು ಆರಂಭವಾಯಿತು. ಕಣ್ಣುಗಳು ಮೇಲೆ ಹೋಯಿತು. ನನ್ನ ಪರಿಸ್ಥಿತಿ ನೋಡಿ ವೈದ್ಯರು ಆಘಾತ ವ್ಯಕ್ತಪಡಿಸುತ್ತಿದ್ದರು. ನನ್ನ ಪೋಷಕರು ಭಯಭೀತರಾಗಿ ನಾನು ಸತ್ತುಹೋಗಿದ್ದೇನೆಂದು ಅಳಲು ಆರಂಭಿಸಿದ್ದರು.
ನಂತರ ದೇವರ ದಯೆಯಿಂದ ನನ್ನ ಆರೋಗ್ಯ ಚೇತರಿಕೆ ಕಂಡಿತು. ಹೃದಯ ಸ್ತಂಭನ ಸಮಸ್ಯೆಯಿಂದ ಬಳಲುತ್ತಿದ್ದೇನೆಂದು ವೈದ್ಯರು ಹೇಳಿದರು. ಈಗಲೂ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅದೃಷ್ಟವೆಂದರೆ ಆ ದಿನ ನಾನು ದೆಹಲಿಯಲ್ಲಿ ನನ್ನ ಪೋಷಕರೊಂದಿಗಿದ್ದೆ. ಆ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಸಾವಿನ ಅಂಚಿಗೆ ಹೋಗಿದ್ದ ದಿನವದು. ಆರೋಗ್ಯವಾಗಿರುವಂತೆ ಶುಭ ಹಾರೈಸಿ ಎಂದು ಹೇಳಿ ನಟಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


